Select Page

ಇತಿಹಾಸ

ಕೃಷಿ ವೃತ್ತಿನಿರತ ಸೌಕರ್ಯಗಳನ್ನು ಒದಗಿಸಲು ಹಾಗೂ ಕೃಷಿಯನ್ನು ಆಧುನೀಕರಣಗೂಳಿಸುವ ಉದ್ದೇಶದಿಂದ ದಿನಾಂಕ ೨೨ ನೇ ನವೆಂಬರ್ ೨೦೦೮ ರಂದು ರಾಯಚೂರು ಕೃಷಿ ವಿಶ್ವವಿದ್ಯಾಲಯವನ್ನು ಮಾನ್ಯ ಘನವೆತ್ತ್ ರಾಜ್ಯಪಾಲರ ಅಧ್ಯಾದೇಶ ಸಂ. ೩/೨೦೦೮ ರ ಅನ್ವಯ ಸ್ಥಾಪಿಸಲಾಯಿತು.

ಕೃಷಿ, ತೋಟಗಾರಿಕೆ, ಅರಣ್ಯ,  ಗೃಹ ವಿಜ್ಞಾನ, ಕೃಷಿ ತಾಂತ್ರಿಕತೆ, ಪಶುವೈದ್ಯಕೀಯ ಮತ್ತು ಪಶುಸಂಗೋಪನೆ, ಹಾಗೂ ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಷಯಗಳಲ್ಲಿ ಉನ್ನತ ಶಿಕ್ಷಣ ಒದಗಿಸುವದು ಹಾಗೂ ಸದರಿ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲಗಳನ್ನು ಹೆಚ್ಚಿಸಿ ಸ್ವ ಉದ್ಯೋಗ, ಸರ್ಕಾರಿ ಹಾಗೂ ಇತರೇ ಸಂಸ್ಥೆ ಗಳಲ್ಲಿ  ಉದ್ಯೋಗ ಹೊಂದಲು ಅಲ್ಲದೇ ಎಲ್ಲಾ ಕೃಷಿ ವ್ಯಾಪಾರೋದ್ಯಮದಲ್ಲಿ ಭಾಗವಹಿಸಲು ಅಗತ್ಯ ಶಿಕ್ಷಣ ನೀಡುವದು ವಿಶ್ವವಿದ್ಯಾಲಯದ ಒಂದು ಮಹತ್ವ ಧ್ಯೇಯೂದ್ದೇಶವಾಗಿದೆ.

ಮುಖ್ಯವಾಗಿ ರಾಜ್ಯದ ಹಾಗೂ ದೇಶದ ಆಹಾರೋತ್ಪಾದನೆಯಲ್ಲಿ ರೈತ ಸಮುದಾಯವು ಮುಂಬರುವ ದಿನಗಳಲ್ಲಿ ಎದುರಿಸುವ ಸಮಸ್ಯೆಗಳನ್ನು ಕಂಡು ಹಿಡಿದು ಆಹಾರೋತ್ಪಾದನೆ, ಸಂಗ್ರಹಣೆ ಹಾಗೂ ಮಾರುಕಟ್ಟೆಯ ವಿಸ್ತರಣೆ ಯಲ್ಲಿ ಕೃಷಿ ಸಂಶೋಧನೆಯನ್ನು ತಲುಪಿಸುವದು ವಿಶ್ವವಿದ್ಯಾಲಯದ ಮತ್ತೊಂದು ಮುಖ್ಯ ಉದ್ದೇಶವಾಗಿರುತ್ತದೆ.

ಶಿಕ್ಷಣ ಹಾಗೂ ಸಂಶೋಧನೆ ಅಲ್ಲದೇ ವಿಶ್ವವಿದ್ಯಾಲಯವು ಕೃಷಿ ಇಲಾಖೆ, ಮಾರುಕಟ್ಟೆ ಹಾಗೂ ಸಹಕಾರ, ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ವರ್ಗ ಹಾಗೂ ಖಾಸಗಿ  ಸಂಸ್ಥೆಗಳಲ್ಲಿನ  ಸಿಬ್ಬಂಧಿಯವರಿಗೆ ಕೃಷಿ  ಸಂಶೋಧನೆಯಲ್ಲಿ ತರಬೇತಿ ನೀಡಿ ವಿಸ್ತರಣಾ ಕಾರ್ಯದಲ್ಲಿ ತೊಡಗಿದವರಿಗೆ ಹೊಸ ಸಂಶೋಧನೆಗಳನ್ನು ತಲುಪಿಸುವದು ಸಹ ಇದರ ಉದ್ದೇಶವಾಗಿದೆ. ಉತ್ತರ     ಕರ್ನಾಟಕದ  ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಕೃಷಿ ವಿಸ್ತರಣಾ ಘಟಕ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ  ವಿಶ್ವವಿದ್ಯಾಲಯವು ವಿಶೇಷ ಕ್ಷೇತ್ರಗಳಲ್ಲಿ ಸುಧಾರಿತ ತಾಂತ್ರಿಕತೆಗಳ ಕುರಿತು ರೈತರಿಗೆ ತರಬೇತಿ ಸಹ ನೀಡುತ್ತದೆ.

ಸಂಪರ್ಕ ವಿಳಾಸ

 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಿಂಗಸಗೂರು ರಸ್ತೆ, ರಾಯಚೂರು ೫೮೪ ೧೦೪. ಕರ್ನಾಟಕ.
ಇಮೇಲ್: registrar@uasraichur.edu.in  ಫೋನ್: 08532-220167
ಅಂಗ್ಲ ಭಾಷೆ ಜಾಲತಾಣ: https://uasraichur.edu.in  ಕನ್ನಡ ಭಾಷೆ ಜಾಲತಾಣ: https://uasraichur.edu.in/kannada