ಕುಲಪತಿ

 

ಗುತ್ತಿ ಜಂಬುನಾಥ್ – ವ್ಯಕ್ತಿ ಪರಿಚಯ

 • ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ದಿನಾಂಕ 31-07-1960ರಂದು ಕೃಷಿ ಕುಟುಂಬದಲ್ಲಿ ಜನನ.
 • ಹೊಸಪೇಟೆಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪದವಿ-ಪೂರ್ವ ಶಿಕ್ಷಣ, ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. ಪದವಿ, ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಎಲ್.ಎಲ್.ಬಿ. ಪದವಿ.
 • ಮಾರ್ಚ್ 1986ರಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆ – ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ಸೇವೆ.
 • ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರ ಆಪ್ತ ಕಾರ್ಯದರ್ಶಿಯಾಗಿ 1998ರಿಂದ 2004ರವರೆಗೆ ನವದೆಹಲಿಯಲ್ಲಿ ಸೇವೆ.
 • ರಾಜ್ಯ ಸರ್ಕಾರದ ಕಾನೂನು ಸಚಿವರ ಹಾಗೂ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯಾಗಿ ಸೇವೆ.
 • ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿಯಲ್ಲಿಯ ಸರ್ಕಾರೇತರ ಸಂಸ್ಥೆಗಳಿಗೆ ಅನುದಾನ ನೀಡುವ ಕಪಾರ್ಟ್ (CAPART) ಸಂಸ್ಥೆಯ ಪ್ರಾದೇಶಿಕ ನಿರ್ದೇಶಕನಾಗಿ ಧಾರವಾಡದಲ್ಲಿ ಸೇವೆ.
 • ದಾವಣಗೆರೆ ಹಾಗೂ ವಿಜಯಪುರ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ (ಜುಲೈ 2008ರಿಂದ ಜುಲೈ 2013)
 • ಮಾನ್ಯ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜುಲೈ 2013ರಿಂದ 29ನೇ ಜುಲೈ 2017ರವರೆಗೆ ಸೇವೆ.
 • ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯತೆ.
 • ಕ್ರೀಡೆ (ಟೆನಿಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್)ಗಳಲ್ಲಿ ಸಕ್ರಿಯ ಭಾಗವಹಿಸುವಿಕೆ.
 • ಸೃಜನಶೀಲ ಬರವಣಿಗೆ ಹಾಗೂ ಲಘು ಸಂಗೀತದಲ್ಲಿ ಆಸಕ್ತಿ.

 

ಸಂಪರ್ಕ ವಿಳಾಸ

ಕೃಷಿ ವಿಶ್ವವಿದ್ಯಾಲಯ, ಲಿಂಗಸಗೂರು ರಸ್ತೆ, ರಾಯಚೂರು ೫೮೪ ೧೦೪. ಕರ್ನಾಟಕ.
ಇಮೇಲ್: registrar@uasraichur.edu.in  ಫೋನ್: 08532-220167
ಅಂಗ್ಲ ಭಾಷೆ ಜಾಲತಾಣ: https://uasraichur.edu.in  ಕನ್ನಡ ಭಾಷೆ ಜಾಲತಾಣ: https://uasraichur.edu.in/kannada