Select Page

ಕುಲಾಧಿಪತಿ

ವಜುಭಾಯಿ ರುದಭಾಯಿ ವಾಲಾ ಗುಜರಾತನ ಹಿರಿಯ ರಾಜಕಾರಣಿ. ಗುಜರಾತ್ ರಾಜ್ಯದಲ್ಲಿ ಶಾಸಕ, ಮಂತ್ರಿ, ಸಭಾಪತಿಯಾಗಿ ಸೇವೆ ಸಲ್ಲಿಸಿದ ವಜುಭಾಯಿ ಸೆಪ್ಟೆಂಬರ್ ೨೦೧೪ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡರು. ೨೩ ಜನವರಿ ೧೯೩೮ರಲ್ಲಿ ಜನಿಸಿದ ವಜುಭಾಯಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಸದಸ್ಯರಾದರು. ೧೯೭೧ರಲ್ಲಿ ಜನಸಂಘ ಸೇರಿದ ವಜುಭಾಯಿ ರಾಜ್ ಕೋಟ್ ನಗರದ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ ಕೋಟ್ ಕ್ಷೇತ್ರದಿಂದ ಆಯ್ಕೆಯಾದ ವಜುಭಾಯಿ, ಕೇಶುಭಾಯಿ ಪಟೇಲ್ ಸಚಿವ ಸಂಪುಟದಲ್ಲಿ ಮಂತ್ರಿಯಾದರು. ೧೯೯೮ ರಿಂದ ೨೦೧೨ರವರೆಗೆ ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಹಣಕಾಸು, ಕಾರ್ಮಿಕ ಖಾತೆಗಳನ್ನು ನಿರ್ವಹಿಸಿದರು. ೧೮ ಬಾರಿ ಗುಜರಾತ್ ರಾಜ್ಯ ಬಜೆಟ್ ಮಂಡಿಸಿದ ವಜುಭಾಯಿ, ೨೦೧೨ರ ನಡೆದ ಚುನಾವಣೆ ಗೆದ್ದು, ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು. ಶಾಸಕರಾಗಿ, ಸಂಪುಟ ಸಚಿವರಾಗಿ ಹಣಕಾಸು, ಕಾರ್ಮಿಕ ಖಾತೆಯಂತಹ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿ ಪ್ರಸ್ತುತ ಕರ್ನಾಟಕದ  ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಸಂಪರ್ಕ ವಿಳಾಸ

 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಿಂಗಸಗೂರು ರಸ್ತೆ, ರಾಯಚೂರು ೫೮೪ ೧೦೪. ಕರ್ನಾಟಕ.
ಇಮೇಲ್: registrar@uasraichur.edu.in  ಫೋನ್: 08532-220167
ಅಂಗ್ಲ ಭಾಷೆ ಜಾಲತಾಣ: https://uasraichur.edu.in  ಕನ್ನಡ ಭಾಷೆ ಜಾಲತಾಣ: https://uasraichur.edu.in/kannada