Select Page

ಕೃತಾಂಮವಿ, ರಾಯಚೂರು

ಮಹಾವಿದ್ಯಾಲಯದ ಬಗ್ಗೆ:
ಕೃಷಿ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು ಅದರ ಗುಣಮಟ್ಟದ ಶಿಕ್ಷಣಕ್ಕಾಗಿ ಐ.ಎಸ್.ಒ:9001-2017 ಪ್ರಮಾಣೀಕೃತ ಹಾಗೂ ಐ.ಸಿ.ಎ.ಆರ್ ಮಾನತ್ಯೆ ಪಡೆದಸಂಸ್ಥೆಯಾಗಿದೆ. ಕೃಷಿ ತಾಂತ್ರಿಕ ಮಹಾವಿದ್ಯಾಲಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಯಚೂರು ಆವರಣದಲ್ಲಿ ಪಟ್ಟಣದಿಂದ ರಾಯಚೂರು-ಲಿಂಗಸೂಗುರು ರಸ್ತೆಯಲ್ಲಿ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. ಕೃಷಿ ತಾಂತ್ರಿಕತೆಯಲ್ಲಿ ಶಿಕ್ಷಣ, ಸಂಶೋಧನೆ, ವಿಸ್ತರಣೆಜೊತೆಗೆ ಕೃಷಿ ತಾಂತ್ರಿಕತೆಯಲ್ಲಿ ಮಾನವ ಶಕ್ತಿ ಅಭಿವೃದ್ದಿ ಪಡಿಸುತ್ತಿರುª Àರಾಜ್ಯದ ಪ್ರಮುಖ ಮಹಾವಿದ್ಯಾಲಯ ಇದಾಗಿದೆ.
ಪ್ರಸ್ತುತ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಆರಂಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಧಿನದಲ್ಲಿ ಕೃಷಿ ತಾಂತ್ರಿಕ ಸಂಸ್ಥೆ ಎಂಬ ಹೆಸರಿನಲ್ಲಿ 1969 ರಲ್ಲಿ ರಾಯಚೂರುನಲ್ಲಿ ಸ್ಥಾಪಿಸಿ ಪ್ರೌಡ ಶಾಲಾ ತೇರ್ಗಡೆ ಹೂಂದಿದ ವಿದ್ಯಾರ್ಥಿಗಳಿಗೆ ಕೃಷಿ ತಾಂತ್ರಿಕತೆಯಲ್ಲ್ಲಿ 3 ವರ್ಷಗಳ ಡಿಪ್ಲೋಮಾ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಡಿ ಒಟ್ಟು 377 ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಪಡೆದಿದ್ದಾರೆ. ತದನಂತರ 3 ವರ್ಷಗಳ ಡಿಪ್ಲೋಮಾ ಕಾರ್ಯಕ್ರಮವನ್ನು 4 ವರ್ಷಗಳ ಬಿ.ಟೆಕ್ (ಕೃಷಿ ತಾಂತ್ರಿಕತೆ) ಆಗಿ ಉನ್ನತೀಕರಿಸಿದ ಪರಿಣಾಮವಾಗಿ 1987ರಲ್ಲಿ ಪ್ರಸ್ತುತ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿನದಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಪದವಿ ಕಾರ್ಯಕ್ರಮಕ್ಕೆ ಪಿಯುಸಿ (ವಿಜ್ಞಾನ) ವಿಷಯ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರವೇಶಾತಿ ಪಡೆದು, ಈವರೆಗೆ 545 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಕೃಷಿ ಯಂತ್ರೋಪಕರಣ ಮತ್ತು ಕೃಷಿ ಶಕ್ತಿ, ನೀರಾವರಿ ಮತ್ತು ಬಸಿಗಾಲುವೆ ತಂತ್ರಜಾÐನ ವಿಭಾಗದಲ್ಲಿ ಎಂ.ಟೆಕ್(ಕೃಷಿ ತಾಂತ್ರಿಕತೆ) ಸ್ನಾತಕೋತ್ತರ ಕಾರ್ಯಕ್ರಮವನ್ನು ಪ್ರತಿ ವಿಭಾಗದಲ್ಲಿ 2 ವಿದ್ಯಾರ್ಥಿಗಳು ಎಂಬಂತೆ 1996 ರಲ್ಲಿ ಪ್ರಾರಂಭಿಸಲಾಯಿತು. ತದನಂತರ ಮಣ್ಣು ಮತ್ತು ನೀರು ಸಂರಕ್ಷಣಾ ತಂತ್ರಜಾÐನ ವಿಭಾಗದಲ್ಲಿ ಎಂ.ಟೆಕ್(ಕೃಷಿ ತಾಂತ್ರಿಕತೆ) ಸ್ನಾತಕೋತ್ತರ ಕಾರ್ಯಕ್ರಮವನ್ನು 1998 ರಲ್ಲಿ ಪ್ರಾರಂಭಿಸಲಾಯಿತು. ಕೃಷಿ ಸಂಸ್ಕರಣೆ ಮತ್ತು ಆಹಾರ ತಂತ್ರಜಾÐನ ವಿಭಾಗದಲ್ಲಿ ಎಂ.ಟೆಕ್ (ಕೃಷಿ ತಾಂತ್ರಿಕತೆ) ಸ್ನಾತಕೋತ್ತರ ಕಾರ್ಯಕ್ರಮವನ್ನು ಪ್ರತಿ ವಿಭಾಗದಲ್ಲಿ 5 ವಿದ್ಯಾರ್ಥಿಗಳು ಎಂಬಂತೆ 2007-08 ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಯಿತು. ಈವರೆಗೆ 75 ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯನ್ನು ಎಂ.ಟೆಕ್ (ಕೃಷಿ ತಾಂತ್ರಿಕತೆ)ಯಲ್ಲಿ ಪಡೆದಿದ್ದಾರೆ.
2009 ರಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಬಂದ ನಂತರ ಕೃಷಿ ತಾಂತ್ರಿಕತೆಯಲ್ಲಿ ಪಂಡಿತ (ಡಾಕ್ಟರಲ್) ಪದವಿ ಕಾರ್ಯಕ್ರಮವನ್ನು ಮೊದಲ ಬಾರಿಗೆ ಮಣ್ಣು ಮತ್ತು ನೀರು ತಂತ್ರಜಾÐನ ವಿಭಾಗದಲ್ಲಿ 2010 ರಲ್ಲಿ ಹಾಗೂ ಕೃಷಿ ಯಂತ್ರೂಪಕರಣ ಮತ್ತು ಶಕ್ತಿ ತಾಂತ್ರಿಕತೆ ಮತ್ತು ಕೃಷಿ ಸಂಸ್ಕರಣೆ ಮತ್ತು ಆಹಾರ ತಂತ್ರಜಾÐನ ವಿಭಾಗದಲ್ಲ್ಲಿ 2013 ರಲ್ಲಿ ಪ್ರಾರಂಭಿಸಲಾಯಿತು. ಈವರೆಗೆ 24 ವಿದ್ಯಾರ್ಥಿಗಳು ಪಂಡಿತ (ಡಾಕ್ಟರಲ್) ಪದವಿ ಪಡೆದಿದ್ದಾರೆ.
ಕೃಷಿ ತಾಂತ್ರಿಕ ಮಹಾವಿದ್ಯಾಲಯ ವಿವಿಧ ಆಯಾಮಗಳಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿರುವ ಮಹಾವಿದ್ಯಾಲಯದ ಉತ್ತಮ ಅರ್ಹ ಮತ್ತು ಅನುಭವಿ ಸಿಬ್ಬಂದಿ ಇದ್ದಾರೆ. ಮಹಾವಿದ್ಯಾಲಯದ ಹೆಚ್ಚಿನ ಶಿಕ್ಷಕ ಸಿಬ್ಬಂದಿಗಳು ವಿದೇಶದಲ್ಲಿ ಓದು ಮುಗಿಸಿದ ಅಥವಾ ವಿದೇಶದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದವರಾಗಿದ್ದಾರೆ, ಅಲ್ಲದೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪ್ರಶಸಸ್ತಿಗಳನ್ನು ಪಡೆದಿದ್ದಾರೆ. ಮಹಾವಿದ್ಯಾಲಯವು ಅತ್ಯಾಧುನಿಕ ಉಪಕರಣಗಳುಳ್ಳ ಸುಸಜ್ಜಿತ ಪ್ರಯೋಗ ಶಾಲೆಗಳನ್ನೊಳಗೊಂಡ ಐದು ವಿಭಾಗಗಳನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಪ್ರಯೋಗಿಕ ಜಾÐನ ಹೆಚ್ಚಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಾ ವಿದ್ಯಾರ್ಥಿಗಳನ್ನು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿಯೂ ಕೂಡ ತೊಡಗಿಸಲಾಗುವುದು, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಮಹಾವಿದ್ಯಾಲಯವನ್ನು ರಾಷ್ಟ್ರೀಯ ಮಟ್ಟದ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಾಣಿ ಶಕ್ತಿ ಬಳಕೆ, ಕೃಷಿ ಯಂತ್ರೋಪಕರಣಗಳು, ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮದಲ್ಲಿ ನವಿಕರಿಸಬಹುದಾದ ಶಕ್ತಿಯ ಬಳಕೆ, ಕೃಷಿಯಲ್ಲಿ ಪ್ಲಾಸ್ಟಿಕ್ ಅನ್ವಯಿಕೆ ಮತ್ತು ಕೊಯ್ಲೋತರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಐದು ಎಐಸಿಆರ್‍ಪಿ ಯೋಜನೆಗಳನ್ನು ನಡೆಸಲಾಗುತ್ತಿದೆ. ಸಿಬ್ಬಂದಿಗಳು ಬಾಹ್ಯವಾಗಿ ಧನ ಸಹಾಯ ನೀಡುವ ಹಲವಾರು ಯೋಜನೆಗಳು, ಆವರ್ತ ನಿಧಿ ಯೋಜನೆಗಳು, ಕೃಷಿ ಯಂತ್ರೋಪಕರಣಗಳ ಪರೀಕ್ಷಣೆ ಮತ್ತು ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಸಹ ನಿರ್ವಹಿಸುತ್ತಿದ್ದಾರೆ.
ಈ ಮಹಾವಿದ್ಯಾಲಯದಲ್ಲಿ ಅಭ್ಯಸಿಸಿದ ಹೆಚ್ಚಿನ ಪದವೀಧರರು ಟ್ರ್ಯಾಕ್ಟರ್ ಉದ್ಯಮ, ನೀರಾವರಿ ಸಂಸ್ಥೆಗಳು, ಆಹಾರ ಸಂಸ್ಕರಣೆ ಉದ್ಯಮ, ಸ್ವಯಂ ಉದ್ಯಮಶೀಲತೆ, ಕೃಷಿ ಇಲಾಖೆ, ಬ್ಯಾಂಕಿಂಗ ಸಂಸ್ಥೆ, ರಾಷ್ಟ್ರೀಯ ಯಂತ್ರೋಪಕರಣ ಪರೀಕ್ಷಾ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ಶಿಕ್ಷಣ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಲ್ಲದೆ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ, ಲೋಕ ಸೇವಾ ಆಯೋಗ, ಪೋಲಿಸ ಇಲಾಖೆ ಹಾಗೂ ಇನ್ನನಿತರ ವಿವಿಧ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದಾರೆ.