Select Page

ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಕಾರ್ಯಚಟುವಟಿಕೆಗಳು

ಕ್ಷೇತ್ರ ಪ್ರಯೋಗಗಳು
ರೈತರ ಜಮೀನುಗಳಲ್ಲಿ ವಿಜ್ಞಾನಿಗಳ ಸಂಶೋಧನೆಯ ಪ್ರಯೋಗಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಕ್ಷೇತ್ರ ಪ್ರಯೋಗಗಳನ್ನು ಕೈಗೊಳ್ಳುತ್ತದೆ. ಕಳೆದ ಸಾಲಿನಲ್ಲಿ ಸುಮಾರು 40 ರೈತರನ್ನೊಳಗೊಂಡಂತೆ 22 ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಗಿದೆ.

ಪ್ರಾತ್ಯಕ್ಷಿಕೆಗಳು
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳಲ್ಲಿ 350 ರೈತರನ್ನು ಒಳಗೊಂಡಂತೆ 130 ಹೇ. ಕ್ಷೇತ್ರದಲ್ಲಿ 35 ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿದೆ. ಈ ಪ್ರಾತ್ಯಕ್ಷಿಕೆಗಳಲ್ಲಿ ಬೆಳೆ ಸಂರಕ್ಷಣೆ, ನೂತನ ಬೇಸಾಯ ಕ್ರಮಗಳು, ತೃಣಧಾನ್ಯಗಳ ಬೇಸಾಯ, ಸಮಗ್ರ ಬೆಳೆ ನಿರ್ವಹಣೆ ಮುಂತಾದ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಲು ಉತ್ತೇಜಿಸಲು ರೈತರ ಜಮೀನಿನಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗಿತ್ತು.

ತರಬೇತಿ ಕಾರ್ಯಕ್ರಮಗಳು
ವಿಸ್ತರಣಾ ಶಿಕ್ಷಣ ಕೇಂದ್ರಗಳು ಸುಮಾರು 44 ಒಳ ಆವರಣ ತರಬೇತಿ ಹಾಗೂ 43 ಹೊರ ಆವರಣ ತರಬೇತಿಗಳನ್ನು ಹಮ್ಮಿಕೊಂಡು 4826 ರೈತರು ಹಾಗೂ ರೈತ ಮಹಿಳೆಯರಿಗೆ ಕೃಷಿ ಸಂಬಂದಿತ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ. ಗ್ರಾಮೀಣ ಯುವಕ ಯುವತಿಯರಿಗೆ 49 ತರಬೇತಿಗಳನ್ನು ನಡೆಸಲಾಗಿ ಸುಮಾರು 2637 ಗ್ರಾಮೀಣ ಯುವಕ ಯುವತಿಯರು ಲಾಭ ಪಡೆದುಕೊಂಡಿರುತ್ತಾರೆ ಮುಂದುವರಿದು ಕೃಷಿ ಹಾಗೂ ಕೃಷಿ ಸಂಬಂದಿತ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಅಧಿಕಾರಿಗಳಿಗೆ ಪ್ರತ್ತ್ಯೇಕವಾಗಿ 52 ತರಬೇತಿ ಕಾರ್ಯಕ್ರಮಗಳ ಮುಖಾಂತರ ಸುಮಾರು 2760 ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಲಾಗಿದೆ.

ಕ್ಷೇತ್ರ ಪರೀಕ್ಷೆಗಳು
ವಿವಿಧ ಬೇಸಾಯ ವ್ಯವಸ್ಥೆಗಳಡಿಯಲ್ಲಿ ಸ್ಥಳ ನಿರ್ದಿಷ್ಟ ಕೃಷಿ ತಂತ್ರಜ್ಞಾನಗಳನ್ನು ಗುರುತಿಸಲು ಕ್ಷೇತ್ರದಲ್ಲಿಯೇ ಪರೀಕ್ಷೆಗಳನ್ನು ಕೈಗೊಳ್ಳಲಾಗಿದ್ದು ಬೆಳೆ ಅಭಿವೃದ್ಧಿ ವಿಷಯದಲ್ಲಿ 5 ತಂತ್ರಜ್ಞಾನಗಳನ್ನು, ಬೆಳೆ ಉತ್ಪಾದನೆಯಲ್ಲಿ
5 ತಂತ್ರಜ್ಞಾನಗಳನ್ನು, ಬೆಳೆ ಸಂರಕ್ಷಣೆಯಲ್ಲಿ 2 ತಂತ್ರಜ್ಞಾಗಳನ್ನು, ತೋಟಗಾರಿಕೆಯಲ್ಲಿ 2 ತಂತ್ರಜ್ಞಾನಗಳನ್ನು, ಗೃಹ ವಿಜ್ಞಾನದಲ್ಲಿ 3 ತಂತ್ರಜ್ಞಾಗಳನ್ನು ಹಾಗೂ ಹೈನುಗಾರಿಕೆಯಲ್ಲಿ 1 ತಂತ್ರಜ್ಞಾನವನ್ನು ಪರಿಷ್ಕರಿಸಿ ರೈತರೊಂದಿಗೆ ತಂತ್ರಜ್ಞಾನಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

I. ಬೆಳೆ ಅಭಿವೃದ್ಧಿ
• ಅಧಿಕ ಉತ್ಪಾದನೆಗಾಗಿ ಶೇಂಗಾ ಬೆಳೆಯ ತಳಿಗಳ ಮೌಲ್ಯಮಾಪನ
• ಭತ್ತದ ಬೆಳೆ ನಂತರ ಸಾಸಿವೆ ಹೊಸ ತಳಿಗಳ ಕ್ಷೇತ್ರ ಪರಿಶೀಲನೆ
• ಹೊಸ ಬೆಂಡಿ ತಳಿಗಳ ಕ್ಷೇತ್ರ ಪರಿಶೀಲನೆ
• ಬೇಸಿಗೆ ಕಾಲಕ್ಕೆ ನೀರಾವರಿ ಪದ್ಧತಿಯಲ್ಲಿ ಬೆಳೆಯುವ ಎಳ್ಳು ಬೆಳೆಯ ಸ್ವೇತಾ ತಳಿಯ ಪರಿಶೀಲನೆ ಪ್ರಾತ್ಯಕ್ಷಿಕೆ
• ಶುಂಠಿ ತಳಿಗಳ ಪರಿಶೀಲನೆ ಪ್ರಾತ್ಯಕ್ಷಿಕೆ
• ಕಡಲೆ ಬೆಳೆಯಲ್ಲಿ ತಳಿಗಳ ಇಳುವರಿ ಸಾಮಥ್ರ್ಯದ ಪರೀಕ್ಷೆ
• ಹೊಸ ಅಲಸಂಧಿ ತಳಿಗಳ ಕ್ಷೇತ್ರ ಪರಿಶೀಲನೆ

II. ಬೆಳೆ ಉತ್ಪಾದನೆ
• ಏರು ಮಡಿ ಪದ್ಧತಿಯಲ್ಲಿ ತೊಗರಿ ತಳಿಗಳ ಮೌಲ್ಯಮಾಪನ
• ಕಡಲೆಯಲ್ಲಿ ಗಂಧಕ ಮತ್ತು ಸತುವಿನ ಕೊರೆತೆ ನಿಗಿಸುವ ತಂತ್ರಜ್ಞಾನಗಳ ಪರಿಶೀಲನೆ ಪ್ರಾತ್ಯಕ್ಷಿಕೆ.

III. ಬೆಳೆ ಸಂರಕ್ಷಣೆ
• ಈರುಳ್ಳಿ ಬೆಳೆಯಲ್ಲಿ ನುಸಿ ಮತ್ತು ನೇರಳೆ ಮಜ್ಜಿಗೆ ರೋಗದ ನಿರ್ವಹಣೆ ತಾಂತ್ರಿಕತೆಗಳ ಪರೀಕ್ಷೆ
• ಕಡಲೆ ಬೆಳೆಯಲ್ಲಿ ಕೊಳೆ ರೋಗ ಮತ್ತು ಸೊರಗು ರೋಗದ ನಿರ್ವಹಣೆ ತಾಂತ್ರಿಕತೆಗಳ ಪರೀಕ್ಷೆ

IV. ತೋಟಗಾರಿಕೆ
• ಅಧಿಕ ಉತ್ಪಾದನೆಗಾಗಿ ಚೆಂಡು ಹೂ ತಳಿಗಳÀ ಮೌಲ್ಯಮಾಪನ
• ಅಧಿಕ ಉತ್ಪಾದನೆಗಾಗಿ ಈರುಳ್ಳಿ ಬೆಳೆಯ ತಳಿಗಳ ಮೌಲ್ಯಮಾಪನ

V. ಪ್ರಾಣಿ ವಿಜ್ಞಾನ
• ಬಹುವಾರ್ಷಿಕ ಮೇವಿನ ಜೋಳದ ಬೀಜದ ತಳಿಗಳ ಮೌಲ್ಯಮಾಪನ

VI. ಗೃಹ ವಿಜ್ಞಾನ
• ವಿವಿಧ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಕೃಷಿ ಕುಟುಂಬಗಳಲ್ಲಿ ಸಮರ್ಪಕ ಪೌಷ್ಠಿಕತೆ ನಿರ್ಧರಿಸುವ ಮಾಪನಗಳ

ಮೌಲ್ಯಮಾಪನ.
• ಪೋಷಕಾಂಶ ಭಧ್ರತೆಗಾಗಿ ನ್ಯೂನ ಪೋಷಣೆ ತಡೆಗಟ್ಟಲು ಬೆಳೆ ಪದ್ಧತಿಗಳ ಪರಿಶೀಲನೆ
• ಮಕ್ಕಳ ಮತ್ತು ಕೃಷಿ ನಿರತ ಹೆಣ್ಣು ಮಕ್ಕಳಲ್ಲಿ “ಸಿ” ಜೀವಸತ್ವ ಕೊರತೆ ಕಂಡು ಹಿಡಿದು, “ಸಿ” ಜೀವಸತ್ವ ಭರಿತ ಆಹಾರದ ಮುಖಾಂತರ ನಿರ್ವಹಣೆ ಮಾಡುವುದು.

ಮುಂಚೂಣಿ ಪ್ರಾತ್ಯಕ್ಷಿಕೆಗಳು
ಕೃಷಿ ವಿಜ್ಞಾನ ಕೇಂದ್ರಗಳು ನೂತನ ಹಾಗೂ ಆಯಾ ಪ್ರದೇಶಕ್ಕೆ ಅನುಗುಣವಾದ ಪರಿಶೀಲಿಸಿದ ಕೃಷಿ ತಂತ್ರಜ್ಞಾನಗಳನ್ನು ರೈತರ ಜಮೀನಿನಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳಾಗಿ ಕೈಗೊಂಡು ಗ್ರಾಮೀಣ ಭಾಗದ ರೈತರಲ್ಲಿ ನೂತನ ಕೃಷಿ ತಂತ್ರಜ್ಞಾನಗಳ ಬಳಕೆಗಳ ಬಗ್ಗೆ ಅರಿವು ಹಾಗೂ ಜನÀಪ್ರಿಯಗೊಳಿಸುವುದು. 2018-19ನೇ ಸಾಲಿನಲ್ಲಿ ಒಟ್ಟು 54 ಕೃಷಿ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಸುಮಾರು 188 ಹೇ ಪ್ರದೇಶದಲ್ಲಿ ರೈತರ ಜಮೀನಿನಲ್ಲಿ ಕೈಗೊಂಡು ಮಾಹಿತಿಯನ್ನು ನೀಡಲಾಗಿದೆ.

ತರಬೇತಿ ಕಾರ್ಯಕ್ರಮಗಳು
ಕೃಷಿ ವಿಜ್ಞಾನ ಕೇಂದ್ರಗಳು 2018-19ನೇ ಸಾಲಿನಲ್ಲಿ ರೈತರಿಗೆ, ರೈತ ಮಹಿಳೆಯರಿಗೆ, ಯುವಕರಿಗೆ, ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿಗಳನ್ನು ನೀಡಿವೆ.

• ಒಳ ಆವರಣ ತರಬೇತಿಗಳು: ಕೃಷಿ ವಿಜ್ಞಾನ ಕೇಂದ್ರಗಳು ಬೆಳೆ ಉತ್ಪಾದನೆ, ಮಣ್ಣು ವಿಜ್ಞಾನ, ಬೆಳೆ ಸಂರಕ್ಷಣೆ, ಕೃಷಿ ತಾಂತ್ರಿಕತೆ, ತೋಟಗಾರಿಕೆ, ಗೃಹ ವಿಜ್ಞಾನ, ಪಶು ಸಂಗೋಪನೆ, ಕೃಷಿ ಮಾರುಕಟ್ಟೆ, ಬೀಜ ವಿಜ್ಞಾನ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ರೈತರಿಂದ ರೈತರಿಗಾಗಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳ ಸಹಿತವಾಗಿ ಒಟ್ಟು 178 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸುಮಾರು 7853 ರೈತರಿಗೆ ಮಾಹಿತಿಯನ್ನು ನೀಡಿದೆ.

• ಹೊರ ಆವರಣ ತರಬೇತಿಗಳು: ಕೃಷಿ ವಿಜ್ಞಾನ ಕೇಂದ್ರಗಳು ಗ್ರಾಮೀಣ ಭಾಗದ ರೈತರನ್ನು ತಲುಪಲು ಕೃಷಿ ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸಲು ಹೊರ ಆವರಣ ತರಬೇತಿಗಳನ್ನು ಕೃಷಿಯ ವಿವಿಧ ವಿಷಯಗಳಲ್ಲಿ ಗ್ರಾಮೀಣ ಭಾಗದಲ್ಲಿಯೇ ತರಬೇತಿಯನ್ನು ಆಯೋಜಿಸಿದೆ. ಒಟ್ಟು 298 ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ 13647 ರೈತರಿಗೆ ಮಾಹಿತಿಯನ್ನು ನೀಡಿದೆ.

• ಗ್ರಾಮೀಣ ಯುವಕ / ಯುವತಿಯರಿಗೆ: ಕೃಷಿ ವಿಜ್ಞಾನ ಕೇಂದ್ರಗಳು ಗ್ರಾಮೀಣ ಭಾಗದ ಯುವಕ / ಯುವತಿಯರಿಗಾಗಿಯೇ ಪ್ರತ್ಯೇಕವಾಗಿ ಕೃಷಿಯ ವಿವಿಧ ವಿಷಯಗಳಲ್ಲಿ ತರಬೇತಿಗಳನ್ನು ಕೈಗೊಂಡು ಮಾಹಿತಿಯನ್ನು ನೀಡಿದೆ ಒಟ್ಟು 91 ತರಬೇತಿಗಳನ್ನು ಆಯೋಜಿಸಿ 3571 ಯುವ ಜನತೆಗೆ ಮಾಹಿತಿಯನ್ನು ನೀಡಿದೆ.

• ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿಗಳು: ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಹಾಗೂ ಸಂಬಂದಿತ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಅಧಿಕಾರಿಗಳಿಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ, ಆಡು ಸಾಕಾಣಿಕೆ ಮುಂತಾದ ವಿಷಯಗಳಲ್ಲಿ ತರಬೇತಿಯನ್ನು ನೀಡಿ ಸರಕಾರಿ ಹಾಗೂ ಸರಕಾರೇತರ ಇಲಾಖೆಗಳ ವಿಸ್ತರಣಾ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. 2018-19ನೇ ಸಾಲಿನಲ್ಲಿ ಒಟ್ಟು 122 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು 4557 ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಿದೆ.

ತಂತ್ರಜ್ಞಾನದ ಸೇವಾ ಪೂರೈಕೆ
ಕೃಷಿ ವಿಜ್ಞಾನ ಕೇಂದ್ರಗಳು ರೈತರುಗಳಿಗೆ ಮುಂಚೂಣಿ ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಪರೀಕ್ಷೆಗಳು, ತರಬೇತಿ ಕಾರ್ಯಕ್ರಮಗಳು ಇವುಗಳ ಜೊತೆಗೆ ಕೃಷಿ ಮಾಹಿತಿ ಹಾಗೂ ನೂತನ ತಂತ್ರಜ್ಞಾನಗಳನ್ನು ಗ್ರಾಮೀಣ ಭಾಗದ ರೈತರಿಗೆ ತಲುಪಿಸಲು ವಿವಿಧ ರೀತಿಯ ವಿಸ್ತರಣಾ ಕಾರ್ಯಕ್ರಮಗಳನ್ನು ಆಯೋಜಿಸಿ ತಂತ್ರಜ್ಞಾನ ಸೇವಾ ಪೂರೈಕೆಯಲ್ಲಿ ರೈತ ಸಮುದಾಯಕ್ಕೆ ಸಹಕಾರಿಯಾಗಿದೆ. ಈ ಕುರಿತಾದ ವಿವರವಾದ ವಿವಿಧ ಕಾರ್ಯಕ್ರಮಗಳ ತಂತ್ರಜ್ಞಾನ ಸೇವಾ ಪೂರೈಕೆಯು ಈ ಕೆಳಗಿನಂತಿವೆ.

ಇತರೆ ವಿಸ್ತರಣಾ ಚಟುವಟಿಕೆಗಳು
• ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ರೈತರ ಸಮಸ್ಯಾತ್ಮಕಗಳ ತಾಕುಗಳಿಗೆ ಭೇಟಿ ನೀಡಿದ ಸಂಖ್ಯೆ 188
• ಕೃಷಿ ವಿಜ್ಞಾನ ಕೇಂದ್ರ/ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳಿಗೆ ಮಾಹಿತಿ ಪಡೆಯಲು ಭೇಟಿ ನೀಡಿದ ರೈತರುಗಳ ಸಂಖ್ಯೆ 9732
• ದೂರವಾಣಿ ಮುಖಾಂತರ ಮಾಹಿತಿ ಪಡೆದ ರೈತರುಗಳ ಸಂಖ್ಯೆ 28593
• ಮೊಬೈಲ್ ಕಿರು ಮಾಹಿತಿ ಸಂದೇಶ ಮುಖಾಂತರ ಕೃಷಿ ತಂತ್ರಜ್ಞಾನವನ್ನು ತಲುಪಿಸಿದ ಸಂಖ್ಯೆ 36748
• ತರಬೇತಿ ಕಾರ್ಯಕ್ರಮಗಳಲ್ಲಿ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತರಬೇತಿಗಳ ಸಂಖ್ಯೆ 504
• ಮಣ್ಣಿನ ಮಾದರಿಗಳ ವಿಶ್ಲೇಷಿಸಿದ ಸಂಖ್ಯೆ 3075
• ನೀರಿನ ಮಾದರಿಗಳ ವಿಶ್ಲೇಷಿಸಿದ ಸಂಖ್ಯೆ 1131
• ವಾಟ್ಸ್‍ಯಾಪ್ ಸಂದೇಶಗಳು 135000

ನೂತನ ಉಪಕ್ರಮಗಳು
• ಕೃಷಿ ನೈಪುಣ್ಯತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮ
ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ, ನವದೆಹಲಿ ಹಾಗೂ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಮತ್ತು ಭಾರತೀಯ ಕೃಷಿ ನೈಪುಣ್ಯತೆ ಅನುಸಂಧಾನ ಸಂಸ್ಥೆಯ (ಂSಅI) ಸಹಯೋಗದೊಂದಿಗೆ ಕೃಷಿ ನೈಪುಣ್ಯತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು 2018-19 ನೇ ಸಾಲಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ, ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿ ಹಾಗೂ ಬೀಜ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದ ವತಿಯಿಂದ ಸುಮಾರು 25 ದಿನಗಳ 6 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ 6 ಕೃಷಿ ನೈಪುಣ್ಯತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಹೈನುಗಾರಿಕೆ, ಅಣಬೆ ಬೇಸಾಯ, ಗುಣಮಟ್ಟದ ಬೀಜೋತ್ಪಾದನೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ವಿಷಯಗಳ ಕುರಿತಾದ ತರಬೇತಿಯಲ್ಲಿ ಪ್ರತಿ ತರಬೇತಿಗೆ 20 ರೈತರಂತೆ ಸುಮಾರು 120 ಯುವ ರೈತರಿಗೆ ತರಬೇತಿ ನೀಡಲಾಗಿದೆ.

• ಜೇನು ಕೃಷಿ ಪ್ರಾತ್ಯಕ್ಷಿಕೆ ಘಟಕ
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ದಿ.22.08.2018 ರಂದು ಜಿಲ್ಲೆಯ ರೈತರಿಗೆ ಜೇನು ಸಾಕಾಣಿಕೆ ಹಾಗೂ ಅದರ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಲು ಜೇನು ಕೃಷಿ ಪ್ರಾತ್ಯಕ್ಷಿಕೆ ಘಟಕವನ್ನು ಸ್ಥಾಪಿಸಲಾಗಿರುತ್ತದೆ. ಕೊಪ್ಪಳ ಜಿಲ್ಲೆಯು ಜೇನು ಕೃಷಿಗೆ ಪ್ರಶಸ್ತವಾಗಿದ್ದು, ಈಗಾಗಲೇ ಜೇನು ಕೃಷಿಕರ ಸಂಘವು ಕೇಂದ್ರದ ಜೀವಶಾಸ್ತ್ರ ವಿಜ್ಞಾನಿಯಾದ ಶ್ರೀ ಪಿ.ಆರ್. ಬದರಿಪ್ರಸಾದ ಇವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿದ್ದು, ಇನ್ನೂ ಹೆಚ್ಚಿನ ರೈತರಿಗೆ ಜೇನು ಕೃಷಿಯನ್ನು ಪರಿಚಯಿಸುವಲ್ಲಿ ಇವರ ಪ್ರಾತ್ಯಕ್ಷಿಕೆ ಘಟಕವು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ತರಬೇತಿಯನ್ನು ನೀಡುವ ಉದ್ದೇಶದಿಂದ ಹಾಗೂ ರೈತರ ಬೇಡಿಕೆ ಆಧಾರದ ಮೇಲೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಪ್ರಗತಿಪರ ರೈತರ ತಾಂತ್ರಿಕ ಆವಿಷ್ಕಾರಗಳನ್ನು ತರಬೇತಿಗಳ ಮೂಲಕ ಇತರ ರೈತರಿಗೆ ತಲುಪಿಸುವ ಅಲ್ಪಾವಧಿ ತರಬೇತಿ ಕಾರ್ಯಕ್ರಮದಡಿ ‘ಬೆಳೆಗಳ ಇಳುವರಿ ಹಾಗೂ ರೈತರ ಆದಾಯ ದ್ವಿಗುಣಕ್ಕಾಗಿ ಜೇನು ಸಾಕಾಣಿಕೆ’ ಕುರಿತು ದಿನಾಂಕ: 18.09.2018 ರಿಂದ 20.09.2018 ರವರೆಗೆ 3 ದಿನಗಳ ತರಬೇತಿಯನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ಆಯೋಜಿಸಲಾಗಿರುತ್ತದೆ.

ಮಹತ್ವದ ಸಾಧನೆಗಳು
• ಕೃಷಿ ವಿಜ್ಞಾನ ಕೇಂದ್ರ ಯಾದಗಿರಿ ಮತ್ತು ರಾಯಚೂರು ಮುಖಾಂತರ 50 ಹಳ್ಳಿಗಳಲ್ಲಿ ಕೃಷಿ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಿರುವುದರಿಂದ, ಕೃಷಿ ಕಲ್ಯಾಣ ಅಭಿಯಾನ, ನೀತಿ ಆಯೋಗ, ಕೇಂದ್ರ ಸರ್ಕಾರ ಕೈಗೊಂಡಿರುವ ಸಮೀಕ್ಷೆ ಪ್ರಕಾರ ದೇಶದ ಒಟ್ಟು 107 ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿರುವ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಕ್ರಮವಾಗಿ ಪ್ರಥಮ ಮತ್ತು ತೃತೀಯ ಶ್ರೇಣಿಯನ್ನು ಪಡೆದುಕೊಂಡಿವೆ.

• ಕೃಷಿ ವಿಶ್ವವಿದ್ಯಾಲಯವು “ಕೂರಿಗೆ ಭತ್ತದ” ಬೇಸಾಯವನ್ನು ಕಳೆದ ನಾಲ್ಕು ವರ್ಷಗಳಿಂದ ಪರಿಚಯಿಸಿದರಿಂದ ಈ ತಂತ್ರಜ್ಞಾನವು 79500 ಹೇ ಪ್ರದೇಶವನ್ನು ಆವರಿಸಿದೆ.

• ವಿಶ್ವವಿದ್ಯಾಲಯವು ಆವಿಷ್ಕರಿಸಿದ ತೊಗರಿ ನಾಟಿ, ಕುಡಿ ಚಿವಟುವ ಪದ್ಧತಿ ಮತ್ತು ಪಲ್ಸ್ ಮ್ಯಾಜಿಕ್ ತಂತ್ರಜ್ಞಾನಗಳನ್ನು 65000 ಹೇ ಪ್ರದೇಶಗಳಲ್ಲಿ ರೈತರು ಅಳವಡಿಸಿದ ಪರಿಣಾಮವಾಗಿ ರೈತರಿಗೆ ಲಾಭ ದೊರಕಿದೆ.

• ಕೃಷಿ ವಿಜ್ಞಾನ ಕೇಂದ್ರಗಳ ಮಣ್ಣು ಪರೀಕ್ಷೆ ಕೇಂದ್ರಗಳಲ್ಲಿ 3075 ಮಣ್ಣು ಹಾಗೂ 1131 ನೀರಿನ ಮಾದರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿ ರೈತರಿಗೆ ಮಾಹಿತಿ ನೀಡಲಾಗಿದೆ.

• 27-28ನೇ ಜನವರಿ, 2019 ರಂದು ಎರಡು ದಿನಗಳ ‘ರೈತ ಸಮ್ಮೇಳನ’ವನ್ನು ಆಯೋಜಿಸಲಾಗಿತ್ತು. ಸದರಿ ಮೇಳದಲ್ಲಿ ಬದಲಾಗುತ್ತಿರುವ ಹವಾಮಾನದಲ್ಲಿ ನೀರಿನ ಮಹತ್ವ, ಹವಾಮಾನಕ್ಕೆ ಸೂಕ್ತ ಕೃಷಿ ಪರ್ಯಾಯ ಪದ್ಧತಿಗಳು, ಮತ್ತು ರೈತರ ಅವಿಷ್ಕಾರಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ ಸುಮಾರು 5000 ರೈತರಿಗೆ ಮಾಹಿತಿ ನೀಡುವುದರೊಂದಿಗೆ ಪ್ರಶಂಷೆಗೊಳಗಾಯಿತು. ‘ನೀರು ಮಾನವ’ ಖ್ಯಾತಿಯ ರಾಜೇಂದ್ರ ಸಿಂಗ್ ವಿಶೇಷ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು.

• ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಹಾಗೂ ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ ಕಲ್ಯಾಣ-ಕರ್ನಾಟಕ ಪ್ರದೇಶದಾದ್ಯಂತ ಕೃಷಿ ಇಲಾಖೆಯ ಸಹಯೋಗದೊಂದಿಗೆ ಸಮೀಕ್ಷೆ ಕೈಗೊಂಡು ಸುಮಾರು 1.5 ಲಕ್ಷ ರೈತರಿಗೆ ಸಮಗ್ರ ಕೀಟ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

• ಕೃಷಿ ವಿಶ್ವವಿದ್ಯಾಲಯವು ಕಲ್ಯಾಣ-ಕರ್ನಾಟಕ ಪ್ರದೇಶದ ಪ್ರತಿ ರೈತ ಸಂಪರ್ಕ ಕೇಂದ್ರಗಳಿಗೆ ಒಬ್ಬ ವಿಜ್ಞಾನಿಯಂತೆ ಸುಮಾರು 162 ರೈತ ಸಂಪರ್ಕ ಕೇಂದ್ರಗಳಿಗೆ ನಿಯೋಜನೆಗೊಳಿಸಿ ಗ್ರಾಮ ಮಟ್ಟದಲ್ಲಿ ಕೃಷಿ ಸಂಬಂಧಿತ ಸಲಹೆ / ಮಾಹಿತಿಯನ್ನು ನೀಡಲಾಗುತ್ತಿದೆ.

ಆಚರಿಸಲಾದ ಪ್ರಮುಖ ಕಾರ್ಯಕ್ರಮಗಳು
ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ವಿವಿಧ ವಿಸ್ತರಣಾ ಚಟುವಟಿಕೆಗಳ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಕೃಷಿ, ಪರಿಸರ ಹಾಗೂ ಇತರೆ ವಿಷಯಗಳ ಕುರಿತಾಗಿ ಅರಿವು ಹಾಗೂ ಜಾಗೃತಿ ಮೂಡಿಸುವುದರ ಸಲುವಾಗಿ ಈ ಕೆಳಗಿನ ಪ್ರಮುಖ ಕಾರ್ಯಕ್ರಮಗಳು ಹಾಗೂ ದಿನಾಚರಣೆಗಳನ್ನು ಆಚರಿಸಲಾಗಿದೆ.