Select Page

ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯ

ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಕೃಷಿ ಮತ್ತು ವಿಶ್ವವಿದ್ಯಾಲಯದ ಬೆಳವಣಿಗೆ, ಇತಿಹಾಸ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು, ನೂತನ ಆವಿಷ್ಕಾರಗಳು, ಸಂದ ಪುರಸ್ಕಾರಗಳು, ಮಾಡಿಕೊಂಡ ಒಡಂಬಡಿಕೆಗಳು ಇತ್ಯಾದಿ ಮಾಹಿತಿಯನ್ನು ಪ್ರದರ್ಶಿಸಲಾಗಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ವಿಷಯಗಳಿಗೆ ಸಂಬಂಧ ಪಟ್ಟ ತಂತ್ರಜ್ಞಾನಗಳ ಪೋಸ್ಟರ್‍ಗಳು, ನಕ್ಷೆಗಳು, ಛಾಯಾ ಚಿತ್ರಗಳು, ಜೀವಂತ ಮಾದರಿಗಳು ಇತ್ಯಾದಿ ಮಾಹಿತಿಗಳನ್ನು ವಸ್ತು ಸಂಗ್ರಹಾಲಯ ಕಟ್ಟಡದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ. ವಸ್ತು ಸಂಗ್ರಹಾಲಯಕ್ಕೆ ರೈತರು, ರೈತ ಮಹಿಳೆಯರು, ಯುವಕರು, ಕೃಷಿ ಪ್ರವಾಸ ನಿಮಿತ್ತ ಭೇಟಿ ನೀಡುವ ವಿದ್ಯಾರ್ಥಿಗಳು ಅಲ್ಲದೇ ಸ್ಥಳೀಯ ಸಾರ್ವಜನಿಕರು ಒಳಗೊಂಡಂತೆ ಇಲ್ಲಿಯವರೆಗೆ ಸುಮಾರು 3000 ಕ್ಕೂ ಹೆಚ್ಚು ಜನ ಭೇಟಿ ನೀಡಿರುತ್ತಾರೆ.