Select Page

ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ

ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ 1956ರಲ್ಲಿ ಸ್ಥಾಪನೆಗೊಂಡಿದೆ. ಕೇಂದ್ರವು 15O, 15’ 40” ಅಕ್ಷಾಂಶ, 76O, 31’ 40” ರೇಖಾಂಶ ಮತ್ತು ಸಮುದ್ರ ಮಟ್ಟದಿಂದ 419 ಮೀ ಎತ್ತರದಲ್ಲಿದೆ. ಇಲ್ಲಿನ ಸರಾಸರಿ ವಾರ್ಷಿಕ ಮಳೆ ಪ್ರಮಾಣವು 537.7ಮಿ.ಮೀ ಇರುತ್ತದೆ. ಈ ಕೇಂದ್ರವು ಹೆಚ್ಚಾಗಿ ಮಧ್ಯಮ ಆಳ ಕಪ್ಪು ಭೂಮಿಯನ್ನು ಹೊಂದಿದೆ.  ಮಣ್ಣಿನಲ್ಲಿ ಸಾವಯವ ಇಂಗಾಲ 0.39 ರಿಂದ 1.05 ರಷ್ಟಿದ್ದು, ಸವಳಿನ ಪ್ರಮಾಣವು 1.3 ರಿಂದ 42.9 ಡಿ.ಎಸ್./ಮೀ. ನಷ್ಟಿದೆ. ಇದರ ರಸಸಾರ 7.5 ರಿಂದ 8.8 ರಷ್ಟಿದೆ. ಅಖಿಲ ಭಾರತ ಸಂಯೋಜಿತ ಭತ್ತದ ಅಭಿವೃದ್ಧಿ ಯೋಜನೆ, ಅಖಿಲ ಭಾರತ ಸಯೋಜಿತ ಸವಳು ಮಣ್ಣಿನ ಯೋಜನೆ ಮತ್ತು ಕೃಷಿಯಲ್ಲಿ ಸವಳು ನೀರಿನ ಬಳಕೆ, ಜೈವಿಕ ಇಂಧನ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರದ ಒಟ್ಟು ಕ್ಷೇತ್ರ 114.8 ಹೆ., ಇದ್ದು ನಿವ್ಹಳ ಸಾಗುವಳಿ ಕ್ಷೇತ್ರವು 90.4 ಹೆ. ಇರುತ್ತದೆ. ಅದರಲ್ಲಿ ನೀರಾವರಿ ಹೊಂದಿರುವ ಕ್ಷೇತ್ರ 78.2 ಹೆ. ಹಾಗೂ ಮಳೆಯಾಶ್ರಿತ ಕ್ಷೇತ್ರ 12.2 ಹೆ. ಇದ್ದು ತೋಟಗಾರಿಕೆ ಬೆಳೆಯಡಿ ಕ್ಷೇತ್ರವು 1.0 ಹೆ. ಇರುತ್ತದೆ.

 

ಡಾ. ಬಿ.ಜಿ ಮಸ್ತಾನರೆಡ್ಡಿ
ಆವರಣ ಮುಖ್ಯಸ್ಥರು
ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ
ಮೋ : 9480696332/9448440518
ಮಿಂಚಂಚೆ: bgmreddy2006@gmail.com