ಧಡೇಸೂಗೂರು ಕೃಷಿ ಸಂಶೋಧನಾ ಕೇಂದ್ರವು 2010 ರಲ್ಲಿ ಸ್ಥಾಪನೆಯಾಗಿದ್ದು, ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿಗೆ ವರ್ಗಾವಣೆಗೊಂಡಿರುತ್ತದೆ. ಈ ಕೇಂದ್ರವು ಭೌಗೋಳಿಕವಾಗಿ ಉತ್ತರಕ್ಕೆ 15.6’ ಅಕ್ಷಾಂಶದಲ್ಲಿ ಹಾಗೂ ಪೂರ್ವಕ್ಕೆ 76.8’ ರೇಖಾಂಶದಲ್ಲಿಯೂ ಮತ್ತು ಸಮುದ್ರಮಟ್ಟಕ್ಕಿಂತ 358 ಮೀ. ಎತ್ತರದಲ್ಲಿ ಸ್ಥಿತಗೊಂಡಿರುತ್ತದೆ.
ಈ ಕೇಂದ್ರವು ಈಶಾನ್ಯ ಒಣವಲಯ (ವಲಯ-2) ಹಾಗೂ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ವಾರ್ಷಿಕವಾಗಿ ಸರಾಸರಿ 630 ಮಿ.ಮಿ. ಮಳೆಯಾಗುತ್ತಿದ್ದು, ಹೆಚ್ಚಿನ ಮಳೆಯು ಜುಲೈ ನಿಂದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರಿಕೃತಗೊಂಡಿದೆ. ಇಲ್ಲಿಯ ಭೂಮಿಯು ಕಪ್ಪು ಮಣ್ಣು ಹೊಂದಿದ್ದು ನೀರಾವರಿಗೆ ಯೋಗ್ಯವಾಗಿದೆ.
ಕೇಂದ್ರದ ಒಟ್ಟು ಜಮೀನಿನ ವಿಸ್ತೀರ್ಣ 76.69 ಹೆಕ್ಟೇರ್ ಇದ್ದು, ಇದರಲ್ಲಿ 60 ಹೆಕ್ಟೇರ್ ಸಾಗುವಳಿ ಭೂಮಿಯಾಗಿದ್ದು, 8 ಹೆಕ್ಟೇರ್ ಜಮೀನಿನಲ್ಲಿ ಮೀನಿನ ಕೆರೆಗಳನ್ನು ತೆಗೆದು ಮೀನುಮರಿಗಳ ಸಾಕಾಣಿಕೆ ಮಾಡಲಾಗುತ್ತಿದೆ. ಇನ್ನುಳಿದ 10.69 ಹೆಕ್ಟೇರ್ ಜಮೀನಿನಲ್ಲಿ ಕಟ್ಟಡಗಳು, ರಸ್ತೆಗಳು ಇತ್ಯಾದಿ ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ…
ಕೃಷಿ ಸಂಶೋಧನಾ ಕೇಂದ್ರದ ಧ್ಯೇಯೋದ್ದೇಶಗಳು:
* ಉತ್ತಮ ಗುಣಮಟ್ಟದ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ಉತ್ಪಾದನಾ ತಾಂತ್ರಿಕತೆಗಳು. * ಉತ್ತಮ ಗುಣಮಟ್ಟದ ವಿವಿಧ ತಳಿಯ ಮೀನಿನ ಮರಿಗಳ ಉತ್ಪಾದನೆ ತಾಂತ್ರಿಕತೆಗಳು. * ಕೃಷಿ ಉತ್ಪಾದನಾ ತಾಂತ್ರಿಕತೆಗಳಾದ ಪೋಷಕಾಂಶಗಳು, ನೀರಿನ ಸದ್ಭಳಕೆ ಹಾಗೂ ಕಳೆಗಳ ನಿರ್ವಹಣೆ ಬಗ್ಗೆ ಸಂಶೋಧನೆ. * ಭತ್ತದಲ್ಲಿ ಕೂರಿಗೆ ಬಿತ್ತನೆ ತಾಂತ್ರಿಕೆತೆಗಳು. * ಕೃಷಿ ಉತ್ಪಾದನಾ ತಾಂತ್ರಿಕತೆಗಳ ಪ್ರಾತಕ್ಷಿತೆಗಳು. * ಕೃಷಿ ತಾಂತ್ರಿಕತೆಗಳ ಬಗ್ಗೆ ರೈತರಿಗೆ ತರಬೇತಿ ಹಾಗೂ ವಿಸ್ತರಣೆ ಚಟುವಟಿಕೆಗಳು.
ಡಾ|| ಬಸವಣ್ಣೆಪ್ಪ ಎಂ.ಎ. ಕೇಂದ್ರದ ಮುಖ್ಯಸ್ಥರು ಕೃಷಿ ಸಂಶೋಧನಾ ಕೇಂದ್ರ, ಧಡೇಸೂಗೂರು ದೂರವಾಣಿ ಸಂಖ್ಯೆ: 9480696333 ಮಿಂಚಂಚೆ: Basavanneppa6@gmail.com |