Select Page

ಕೃಷಿ ಸಂಶೋಧನಾ ಕೇಂದ್ರ, ಭೀಮರಾಯನಗುಡಿ

 

ಕೃಷಿ ಸಂಶೋಧನಾ ಕೇಂದ್ರವು ಕರ್ನಾಟಕ ರಾಜ್ಯದ ಈಶಾನ್ಯ ಶುಷ್ಕ ವಲಯದ (ಪ್ರದೇಶ – 2 ವಲಯ-2), 160 43 ಅಕ್ಷಾಂಶ,720 51 ಇ ರೇಖಾಂಶದ ಮಧ್ಯ 411.75 ಮೀಟರ ಎತ್ತರದಲ್ಲಿ ಯಾದಗಿರಿ ಜಿಲ್ಲೆಯ ಶಹಾಪೂರು ತಾಲೂಕಿನಿಂದ 5 ಕೀ.ಮಿ ದೂರದಲ್ಲಿದೆ. ರಾಷ್ಟ್ರಿಯ ಹೆದ್ದಾರಿ 150 ಬೀದರಿನಿಂದ ಶ್ರೀರಂಗಪಟ್ಟಣದವರೆಗೆ ಸಂಪರ್ಕ ಹೊಂದಿದೆ. ರೈಲು ನಿಲ್ದಾಣವು ಕೇಂದ್ರದಿಂದ ಸುಮಾರು (ಕಲಬುರ್ಗಿ 70 ಕೀ.ಮಿ) ಯಾದಗೀರ (35 ಕೀ.ಮಿ) ದೂರ ನೆಲೆಗೊಂಡಿದೆ. ನೆರೆಯ ತೆಲಾಂಗಣ ರಾಜ್ಯದ ಹೈದ್ರಾಬಾದ್ ಜಿಲ್ಲೆಯ ಸುಮಾರು 100 ಕೀ.ಮಿ ದೂರದಲ್ಲಿದೆ, ಹಾಗೂ ಇದು ಹತ್ತಿರದ ಅಂತರಾಷ್ಟ್ರಿಯ ವಿಮಾನ ನಿಲ್ದಾಣವಾಗಿದೆ. ಕೃಷಿ ಸಂಶೋಧನಾ ಕೇಂದ್ರವು ಶುಷ್ಕ ಹವಾಮಾನದಿಂದ ಕೂಡಿದ್ದು ವಾರ್ಷಿಕ ಸರಾಸರಿ 820 ಮೀ.ಮಿ ಮಳೆಯಾಗುತ್ತದೆ. ಈ ಭಾಗದ ಕೃಷಿ ಕ್ಷೇತ್ರದ ಸರ್ವೊತೊಮುಖ ಬೆಳವಣಿಗೆಯ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು 1981-82ನೇ ಇಸ್ವಿಯಲ್ಲಿ ಕೃಷಿ ಸಂಶೋಧನಾ ಕೇಂದ್ರವು ಕೃಷ್ಣಾ ಅಚ್ಚುಕಟ್ಟು ಯೋಜನೆಯ ಆರ್ಥಿಕ ನೇರವಿನೊಂದಿಗೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಅಧೀನದಡಿಯಲ್ಲಿ ಸ್ಥಾಪಿಸಲಾಯಿತು.

ಕೃಷಿ ಸಂಶೋಧನಾ ಕೇಂದ್ರವು 398 ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ 100.7 ಹೇಕ್ಟರ ಕೃಷಿ ಸಾಗುವಳಿ ಭೂಮಿ, 80 ಹೆಕ್ಟರ್ ಪ್ರದೇಶ ನೀರಾವರಿ ವ್ಯವಸ್ಥೆಯಿಂದ ಕೂಡಿದೆ. ಇಡೀ ಸಂಶೋಧನಾ ಕೇಂದ್ರದ ಕ್ಷೇತ್ರವನ್ನು ಐದು ಘಟಕಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೇ, ಕಾಡಾ, ಕಾಲೇಜು, ಪ್ರಾಯೋಗಿಕ, ದಿಗ್ಗಿ ಕೋರಿಕೆ ನಿಲ್ದಾಣ ಮತ್ತು ಶಾಖಾಪುರ ಬ್ಲಾಕ್‍ಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಕೇಂದ್ರದ ಪ್ರಮುಖ ಕ್ಷೇತ್ರವಾದ ಕಾಡಾ ಬ್ಲಾಕಿನ ಸುಮಾರು 200 ಎಕರೆ ಪ್ರದೇಶ ಹೊಂದಿದ್ದು ಮುಖ್ಯವಾಗಿ ಬೀಜೋತ್ಪಾನದೆ ಮೇವುಬೆಳೆ ಉತ್ಪಾದನೆ, ಮೀನು ಸಾಕಾಣಿಕೆ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಇದಲ್ಲದೇ ಸಂಪನ್ಮೂಲ ಸಂರಕ್ಷಣಾ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಕೃಷಿ ಚಟುವಟಿಕೆಗಳು, ಪರಿಸರ ಪರಿಣಾಮಗಳ ಅಧ್ಯಯನ, ಸಮಗ್ರ ಕೃಷಿ ಕೀಟ ನಿರ್ವಹಣೆ, ಪೋಷಕಾಂಶಗಳ ಮರು ಬಳಕೆ, ಬೆಳೆ ಪರಿವರ್ತನೆ, ಸಮಗ್ರ ಕೃಷಿ ಪದ್ದತಿ ಯೋಜನೆಗಳ ಜೊತೆಗೆ ತೋಟಗಾರಿಕೆ ಬೆಳೆಗಳ ಕ್ಷೇತ್ರವು ಒಳಗೊಂಡಿದೆ.

ಕೃಷಿ ಮೇಳದ ಸಂದರ್ಭದಲ್ಲಿ ಕಾಲೇಜುಬ್ಲಾಕಿನ ಸುಮಾರು 8 ಹೆಕ್ಟರ್ ಕ್ಷೇತ್ರದಲ್ಲಿ ಕೃಷಿ ತಂತ್ರಜ್ಞಾನಗಳ ಪ್ರದರ್ಶನ ಸಮಗ್ರ ಕೃಷಿ ಪದ್ಧತಿಗಳ ಮಾದರಿ ತಾಕುಗಳು ಮತ್ತು ಇತರ ಸಂಶೋಧನಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಕೇಂದ್ರದ ಪ್ರಾಯೋಗಿಕ ಬ್ಲಾಕಿನಲ್ಲಿ ಸುಮಾರು 9 ಹೆಕ್ಟರ್ ಕ್ಷೇತ್ರದಲ್ಲಿ ಸ್ನಾತಕ ಮತ್ತು ಪದವಿ ವಿಧ್ಯಾರ್ಥಿಗಳ ಸಂಶೋಧನೆ ಯೋಜನೆ ಮತ್ತು ಬೆಳೆ ಉತ್ಪಾದನೆ ಸಲುವಾಗಿ ಬಳಸಲಾಗುತ್ತಿದೆ. ಕೇಂದ್ರದ ಶಾಖಾಪುರ ಬ್ಲಾಕಿನಲ್ಲಿ 5 ಹೆಕ್ಟರ್ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿ ಮಾದರಿ ತಾಕುಗಳ ಸಲುವಾಗಿ ಬಳಸಲಾಗುತ್ತದೆ. ಅದೇ ರೀತಿ ಕೇಂದ್ರದ ಡಿಗ್ಗಿ ಬ್ಲಾಕಿನ ಸುಮಾರು 8 ಹೆಕ್ಟರ್ ಕ್ಷೇತ್ರದಲ್ಲಿ ಬೀಜೋತ್ಪಾದನೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ

ಡಾ. ದಯಾನಂದ ಸಾತಿಹಾಳ
ಕ್ಷೇತ್ರ ಅಧೀಕ್ಷಕರು ಮತ್ತು ಮುಖ್ಯಸ್ತರು,
ಕೃಷಿ ಸಂಶೋಧನಾ ಕೇಂದ್ರ, ಭೀಮರಾಯನಗುಡಿ
ತಾ|| ಶಹಾಪೂರ ಜಿ|| ಯಾದಗಿರಿ-585 287
Phone:9480696325
Fax:08479222090
E-mail:arsbgudi@rediffmail.com