Select Page

ಕೃಷಿ ಸಂಶೋಧನಾ ಕೇಂದ್ರ, ರದ್ದೇವಾಡಗಿ

ಕೃಷಿ ಸಂಶೋಧನಾ ಕೇಂದ್ರ, ರದ್ದೇವಾಡ್ಗಿಯು 2005 ರಲ್ಲಿ ಸ್ಥಾಪನೆಗೊಂಡಿದೆ. ಸಂಶೋಧನಾ ಕೇಂದ್ರವು ಕರ್ನಾಟಕದ ಉತ್ತರ ಪೂರ್ವ ಭಾಗದಲ್ಲಿ ಭೀಮ ನದಿಯ ತಟದಲ್ಲಿ 50 ಎಕರೆ ಪ್ರದೇಶವನ್ನು ಹೊಂದಿದ್ದು ಮತ್ತು 475 ಮಿ.ಮೀ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಹೊಂದಿದೆ. ಕೇಂದ್ರವು ಜೇರ್ವಗಿ ಪಟ್ಟಣದಿಂದ 4 ಕಿ.ಮೀ ದೂರದಲ್ಲಿ ಇದ್ದು ಹಾಗೂ ರಾಜ್ಯ ಹೆದ್ದಾರಿ 19ರ ಮುಖಾಂತರ ತಲುಪಬಹುದಾಗಿದೆ. ಕೃಷಿ ಸಂಶೋಧನಾ ಕೇಂದ್ರವನ್ನು ಉತ್ತರ ಮತ್ತು ದಕ್ಷಿಣ ಎಂಬ ಭಾಗಗಳನ್ನು ವಿಂಗಡನೆ ಮಾಡಲಾಗಿದೆ ಉತ್ತರ ಭಾಗದಲ್ಲಿ ಮೇವು ಮತ್ತು ಉತ್ತಮ ಗುಣಮಟ್ಟದ ತೊಗರಿ, ಹೆಸರು, ಕಡಲೆ ಮತ್ತು ಜೋಳದ ಬೆಳೆಗಳ ಬೀಜೊತ್ಪಾದನೆ ಮಾಡಲಾಗುತ್ತಿದೆ. ಉಳಿದ ದಕ್ಷಿಣ ಭಾಗದಲ್ಲಿ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ ವಿಭಾಗ, ಹೈನುಗಾರಿಕೆ ವಿಭಾಗ, ಕೃಷಿ ಸಂಶೋಧನಾ ಕಾರ್ಯಾಲಯ, ಬೀಜ ಘಟಕ, ಕುರಿ ಮತ್ತು ಆಡು ಸಾಕಾಣಿಕೆ ವಿಭಾಗ, ಹವಮಾನ ವಿಭಾಗ ಮತ್ತು ಇನ್ನಿತರ ಸಂಶೋಧನಾ ತಾಕುಗಳನ್ನು ಒಳಗೊಂಡಿದೆ. ಈ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ಉದ್ದೇಶವೆಂದರೆ ಉತ್ತಮ ಗುಣಮಟ್ಟದ ತೊಗರಿ, ಹೆಸರು, ಕಡಲೆ ಮತ್ತು ಜೋಳದ ಬೆಳೆಗಳ ಬೀಜೊತ್ಪಾದನೆಯನ್ನು ಮಳೆಯಾಶ್ರೀತ ಪ್ರದೇಶದಲ್ಲಿ ಮಾಡಲಾಗುತ್ತಿದೆ.

 

ಡಾ. ಬಸವರಾಜ
ಕ್ಷೇತ್ರ ಅಧೀಕ್ಷಕರು
ಕೃಷಿ ಸಂಶೋಧನಾ ಕೇಂದ್ರ, ರದ್ದೇವಾಡ್ಗಿ -585 310
ಮೋ- 9480696324
ಮಿಂಚಂಚೆ: fsarsraddewadgi@uasraichur.edu.in 
                       fsarsrwd@gmail.com