1950 ರ ಪೂರ್ವದಲ್ಲಿ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳೆರಡೂ ಒಂದಿಲ್ಲೊಂದು ವರ್ಷಕ್ಕೆ ಬರವಿಕೋಪಕ್ಕೆ ತುತ್ತಾಗುತ್ತಲೇ ಬಂದಿದ್ದವು. ಈ ವಿಕೋಪವನ್ನು ಶಾಶ್ವತವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಹಾಗೂ ಇಲ್ಲಿ ಹರಿಯುವ ತುಂಗಭದ್ರಾ ನದಿಯ ನೀರನ್ನು ಕೃಷಿಗೆ ಬಳಸುವ ಮೂಲ ಉದ್ದೇಶದಿಂದ ನದಿಯ ನೀರು ಮತ್ತು ಈ ಪ್ರದೇಶದ ಮಣ್ಣು ಪರಿಶೀಲಿಸುವ ಕಾರ್ಯವನ್ನು ಮಣ್ಣು ಮಾಪನ ಸಮಿತಿಯು ಮಾಡಿತ್ತು. ಸದರಿ ಸಮಿತಿಯ ಅಧ್ಯಯನದ ಪ್ರಕಾರ ನದಿಯ ನೀರು ಮತ್ತು ಈ ಪ್ರದೇಶದ ಮಣ್ಣು ನೀರಾವರಿಗೆ ಯೋಗ್ಯವಾಗಿದೆಯೆಂದು ತಿಳಿಸಿತ್ತು . ತತ್ಪರಿಣಾಮವಾಗಿ ನೀರಾವರಿ ಅಭಿವೃದ್ಧಿ ಮಂಡಳಿಯು ಸದರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಹಾಗೂ ನೀರಾವರಿಯಿಂದಾಗಿ ಭೂಮಿಯು ಕ್ಷಾರ, ಜವಳು ಮತ್ತು ಸವಳು ಉಂಟಾಗುವುದನ್ನು ಅಧ್ಯಯನ ನಡೆಸುವ ಮೂಲ ಉದ್ದೇಶದಿಂದ ಕೃಷಿ ಸಂಶೋಧನಾ ಕೇಂದ್ರವನ್ನು ಸಿರುಗುಪ್ಪದಲ್ಲಿ ಸ್ಥಾಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರ ಪರಿಣಾಮವಾಗಿ ಈ ಕೇಂದ್ರವು 1937 ರಲ್ಲಿ ಉಗಮ ಗೊಂಡಿತು.
ಈ ಕೇಂದ್ರವು ಉತ್ತರ ಒಣವಲಯ (ಪ್ರದೇಶ-2, ವಲಯ-3) ವ್ಯಾಪ್ತಿಗೆ ಬರುತ್ತಿದ್ದು ಉತ್ತರ ಕರ್ನಾಟಕಕ್ಕೆ ಒಳಪಟ್ಟಿದೆ. ಇದು ಸಿರುಗುಪ್ಪದಿಂದ 1.5 ಕಿ.ಮೀ ಅಂತರದಲ್ಲಿ ಆದೋನಿ ರಸ್ತೆಯಲ್ಲಿದೆ. ಇಲ್ಲಿ ವರ್ಷಕ್ಕೆ 550 ರಿಂದ 600 ಮಿ.ಮಿ. ಮಳೆಯಾಗುತ್ತಿದ್ದು, ಹೆಚ್ಚಿನ ಮಳೆಯು ಜುಲೈ ನಿಂದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರಿಕೃತಗೊಂಡಿದೆ. ಇಲ್ಲಿಯ ಭೂಮಿಯು ಕಪ್ಪು ಮಣ್ಣು ಹೊಂದಿದ್ದು ನೀರಾವರಿಗೆ ಯೋಗ್ಯವಾಗಿದೆ.
Basavanneppa M.A The Chief Agronomist and Campus Head Siruguppa -583121 Phone:9480696333 Fax:08396-220249 E-mail:ars.sgp583121@gmail.com |