Select Page

ಡೀನ್ (ಸ್ನಾತಕೋತ್ತರ)

ಡಾ|| ಸತ್ಯನಾರಾಯಣರಾವ್
ಡೀನ್ (ಸ್ನಾತಕೋತ್ತರ)
ವಿಳಾಸ: ಸ್ನಾತಕೋತ್ತರ ನಿರ್ದೇಶನಾಲಯ
ಕೃ.ವಿ.ವಿ., ರಾಯಚೂರು- 584 104
ಸಂಚಾರದೂರವಾಣಿ : 9480696306
ಸ್ಥಿರ ದೂರವಾಣಿ : 08532-220 168
ದೂರ ಪತ್ರಕ : 08532-220 168
ಮಿಂಚಂಚೆ ವಿಳಾಸ:deanpgs@uasraichur.edu.in

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ,ರಾಯಚೂರು 2009ನೇಇಸವಿಯಲ್ಲಿ ಆಸ್ತಿತ್ವಕ್ಕೆ ಬಂದಿರುತ್ತದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಡಳಿತಾತ್ಮಕ ಅನುಸರಣಿಯಲ್ಲಿರುವಕಾಲದಲ್ಲಿ1996ನೇ ಇಸವಿಯಲ್ಲಿಸ್ನಾತಕೋತ್ತರ ವಿದ್ಯಾಬೋಧನೆಬೇಸಾಯ ಶಾಸ್ತ್ರ, ಅನುವಂಶಿಕ ಮತ್ತು ಸಸ್ಯತಳಿ ಅಭಿವೃದ್ಧಿ, ಕೃಷಿ ಕೀಟಶಾಸ್ತ್ರ ಮತ್ತು ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗಗಳಲ್ಲಿ ಪ್ರಾರಂಭಿಸಲಾಗಿದೆ. ತದನಂತರ ಹೆಚ್ಚುವರಿಯಾಗಿ 8 ವಿಭಾಗಗಳು ಇದಕ್ಕೆ ಸೇರ್ಪಡೆಗೊಂಡಿವೆ. ಪ್ರಸ್ತುತ ಕೃಷಿ ವಿಭಾಗಕ್ಕೆ ಸಂಬಂದಿಸಿದಂತೆ12 ಶೈಕ್ಷಣಿಕ ವಿಷಯಗಳಲ್ಲಿ ಅಂದರೆ ಕೃಷಿ ಅರ್ಥಶಾಸ್ತ್ರ, ಕೃಷಿ ಕೀಟಶಾಸ್ತ್ರ, ಕೃಷಿ ವಿಸ್ತರಣೆ, ಕೃಷಿ ಸೂಕ್ಷ್ಮಜೀವಿ ಶಾಸ್ತ್ರ, ಬೇಸಾಯ ಶಾಸ್ತ್ರ, ಬೆಳೆ ಶರೀರಕ್ರೀಯಾಶಾಸ್ತ್ರ, ಅನುವಂಶಿಕ ಮತ್ತು ಸಸ್ಯತಳಿ ಅಭಿವೃದ್ಧಿ, ತೋಟಗಾರಿಕೆ, ಅಣುಜೀವಶಾಸ್ತ್ರ ಮತ್ತು ಕೃಷಿ ಜೈವಿಕತಂತ್ರಜ್ಞಾನ, ಸಸ್ಯರೋಗ ಶಾಸ್ತ್ರ, ಬೀಜ ವಿಜ್ಞಾನ ಮತ್ತುತಾಂತ್ರಿಕತೆ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರಇತ್ಯಾದಿಗಳಲ್ಲಿ ಅದೇರೀತಿ ಕೃಷಿ ತಾಂತ್ರಿಕತೆ ವಿಭಾಗದಲ್ಲಿ ಸಂಬಂದಿಸಿದಂತೆ3 ಶೈಕ್ಷಣಿಕ ವಿಷಯಗಳಲ್ಲಿ, ಕೃಷಿ ಯಂತ್ರೋಪಕರಣ ಶಕ್ತಿ ತಂತ್ರಜ್ಞಾನ, ಸಂಸ್ಕರಣಆಹಾರತಂತ್ರಜ್ಞಾನ, ಮಣ್ಣು ಮತ್ತು ನೀರುತಂತ್ರಜ್ಞಾನಇತ್ಯಾದಿಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ನಡೆಸಲಾಗುತ್ತಿದೆ. ಮುಂದುವರೆದು ಕೃಷಿ ವಿಭಾಗಕ್ಕೆ ಸಂಬಂದಿಸಿದಂತೆಅಣುಜೀವ ಶಾಸ್ತ್ರ ವಿಷಯವನ್ನು ಹೊರತುಪಡಿಸಿ ಉಳಿದ 11 ಶೈಕ್ಷಣಿಕ ವಿಷಯಗಳಲ್ಲಿ ಪಂಡಿತ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ನಡೆಸಲಾಗುತ್ತಿದೆ. ಕೃಷಿತಾಂತ್ರಿಕತೆವಿಭಾಗದಲ್ಲಿಮೇಲೆ ತಿಳಿಸಿದ3 ಶೈಕ್ಷಣಿಕ ವಿಷಯಗಳಲ್ಲಿ ಪಂಡಿತ ಪದವಿಗಳ ವಿದ್ಯಾಬೊಧನೆಯನ್ನು ಮಾಡಲಾಗುತ್ತಿದೆ. ಕೃಷಿ ವಿಭಾಗ ಮತ್ತು ಕೃಷಿ ತಾಂತ್ರಿಕತೆ ವಿಭಾಗದ ಸ್ನಾತಕೋತ್ತರ ಪದವಿಗಳನ್ನು ಅನುಕ್ರಮವಾಗಿರಾಯಚೂರುಆವರಣದ ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ನಡೆಸಲಾಗುತ್ತಿದೆ.
ಸ್ನಾತಕೋತ್ತರ ಪದವಿಯ ಕಾಲಮಿತಿಎರಡು ಶೈಕ್ಷಣಿಕ ವರ್ಷಗಳು (4 ಷಣ್ಮಾಸಿಕಗಳು) ಮತ್ತು ಪಂಡಿತ ಪದವಿಯ ಕಾಲಮಿತಿ ಮೂರು ಶೈಕ್ಷಣಿಕ ವರ್ಷಗಳು (6 ಷಣ್ಮಾಸಿಕಗಳು) ಇರುವಂತೆ ನಿಗದಿಪಡಿಸಲಾಗಿದೆ. ಕರ್ನಾಟಕರಾಜ್ಯದ 5 ಕೃಷಿ ವಿಶ್ವವಿದ್ಯಾಲಯಗಳುಜಂಟಿಯಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಮುಖಾಂತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ನೀಡಲಾಗುತ್ತದೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯರಾಯಚೂರು ಪ್ರಾರಂಭ ವರ್ಷವಾದ 2009-10ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 78 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈಸಂಖ್ಯೆ ಸ್ಥಿರವಾಗಿ ಬೆಳೆದು 2019-20 ಶೈಕ್ಷಣಿಕ ವರ್ಷದಲ್ಲಿ110ಕ್ಕೆ ಏರಿದೆ. ಅದೇರೀತಿ 2011-12ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 17 ವಿದ್ಯಾರ್ಥಿಗಳು ಪಂಡಿತ ಪದವಿಗೆ ಪ್ರವೇಶ ಪಡೆದಿದ್ದರು. ಈ ಸಂಖ್ಯೆ ಬೆಳೆದು 2019-20 ಶೈಕ್ಷಣಿಕ ವರ್ಷದಲ್ಲಿ31 ಪಂಡಿತ ಪದವಿ ವಿದ್ಯಾರ್ಥಿಗಳು ಪ್ರವೇಶ ಪಡೆದಿಕೊಂಡಿದ್ದಾರೆ. 2010-11ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 35 ಸ್ನಾತಕೋತ್ತರ ವಿದ್ಯಾರ್ಥಿಗಳು ತೇರ್ಗಡೆಯಾದರೆ 2018-19ನೇ ವರ್ಷಕ್ಕೆ ಈ ಸಂಖ್ಯೆ135ಕ್ಕೆ ಏರಿದೆ. ಅದೇರೀತಿ 2014-15 ಶೈಕ್ಷಣಿಕ ವರ್ಷದಲ್ಲಿ ಕೇವಲ 12 ಪಂಡಿತ ಪದವಿ ವಿದ್ಯಾರ್ಥಿಗಳು ತೇರ್ಗಡೆಯಾದರೆ 2018-19 ವರ್ಷದಲ್ಲಿ33 ವಿದ್ಯಾರ್ಥಿಗಳು ಉತ್ತೀರ್ಣರಾದರು. ಸ್ನಾತಕೋತ್ತರ ವಿದ್ಯಾಬೋಧನೆಪ್ರಾರಂಭವಾಗಿದ ವರ್ಷದಿಂದÀಇಲ್ಲಿಯವರೆಗೆ784 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು91 ವಿದ್ಯಾರ್ಥಿಗಳು ಪಂಡಿತ ಪದವಿಯನ್ನು ಪಡೆದಿರುತ್ತಾರೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯರಾಯಚೂರು 23 ರಾಷ್ಟ್ರೀಯ ಮತ್ತು 11 ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸ್ನಾತಕೋತ್ತರ ವಿಷಯಗಳ ಸಂಶೋಧನಾ ಸಂಬಂದಒಡಂಬಡಿಕೆ ಮಾಡಿಕೊಂಡಿರುತ್ತದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತುಶಿಕ್ಷಕರ ಉಪಯೋಗಕ್ಕಾಗಿ ಸ್ನಾತಕೋತ್ತರ ನಿರ್ದೇಶನಾಲಯ ಕೆಳಗೆ ನಮೂದಿಸಿದ ಕಿರು ಹೊತ್ತಿಗೆಗಳನ್ನು ಬಿಡುಗಡೆಗೊಳಿಸಿದೆ.

  1. ಶೈಕ್ಷಣಿಕ ಮಾಹಿತಿ ಮತ್ತು ನಿಯಮಾವಳಿಗಳು 2019-20.
  2. ಸ್ನಾತಕೋತ್ತರ ಮತ್ತು ಪಂಡಿತ ಪದವಿಗಳ ಸಂಶೋಧನಾ ಪ್ರಬಂದಗಳ ಸಿದ್ಧತೆ.
    ಭವಿಷ್ಯದದೃಷ್ಟಿಕೋನ:-ಸ್ನಾತಕೋತ್ತರ ನಿರ್ದೇನಾಲಯವು ಕೆಳಗೆ ನಮೂದಿಸಿದ ಉದ್ದೇಶಗಳನ್ನು ಈಡೇರಿಸಲುಸದಾಕಾರ್ಯೋನ್ಮುಖವಾಗಿರುತ್ತದೆ.
  3. ಕೃಷಿ ಮತ್ತುತತ್ಸಂಬಂಧಿತ ಕ್ಷೇತ್ರಗಳ ಪೈಕಿ ಉನ್ನತ ಮಟ್ಟದ ತರಬೇತಿಗಳ ಮುಖಾಂತರ ಯುವಪೀಳಿಗೆಗಳಲ್ಲಿ ಸಂಶೋಧನಾ ಮುಂದಾಳತ್ವ ಮತ್ತು ವ್ಯವಸ್ಥಾಪಕ ವೃತ್ತಿಪರತೆಯನ್ನು ನೆಲೆಗೊಳಿಸುವುದು.
  4. ಹೊಸ ಹೊಸ ಉದಯೋನ್ಮುಖ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳ ಮುಖಾಂತರಅನುಭವಆಧಾರಿತಕಲಿಕೆಯನ್ನು ಒದಗಿಸಿ ಅವರಕಾರ್ಯಕ್ಷಮತೆಯನ್ನುಉನ್ನತೀಕರಿಸುವುದು.