Select Page

ದೇಸಿ ಕಾರ್ಯಕ್ರಮ (DAESI)

ದೇಸಿ (DAESI), ಡಿಪ್ಲೋಮಾ ಕಾರ್ಯಕ್ರಮವು ಕೃಷಿ ಪರಿಕರ ವಿತರಕರಿಗೆ ಒಂದು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸ್ ಆಗಿದ್ದು, ಮುಖ್ಯವಾಗಿ ಪರಿಕರ ವಿತರಕರ ಕೃಷಿ ಜ್ಞಾನವನ್ನು ನವೀಕರಿಸುವ ಮತ್ತು ಕೃಷಿ ತಾಂತ್ರಿಕತೆಗಳನ್ನು ವರ್ಗಾಯಿಸುವ ಕಾರ್ಯದಲ್ಲಿ ಪರಿಕರ ವಿತರಕರನ್ನು‘ಪೂರಕ ವಿಸ್ತರಣಾ ಕಾರ್ಯಕರ್ತರಾಗಿ’ ಬಳಸಿಕೊಳ್ಳುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಈ ಕಾರ್ಯಕ್ರಮದ ಒಟ್ಟಾರೆ ನಿರ್ವಹಣೆಯ ಜವದ್ಬಾರಿಯನ್ನು ಹೊಂದಿದ್ದು, ಹೈದರಾಬಾದ್‍ನಲ್ಲಿರುವ MANAGE ಸಂಸ್ಥೆಗೆ ಆಯಾ ರಾಜ್ಯಗಳ SAMETI ಕೇಂದ್ರಗಳ ಮುಖಾಂತರ ದೇಸಿ ಕಾರ್ಯಕ್ರಮವನ್ನು ಅನುಷ್ಠಾನಗೈಯುವ ಅಧಿಕಾರ ನೀಡಿದೆ. ಕೃಷಿ ಪರಿಕರ ವಿತರಕರನ್ನು ಪೂರಕ ವಿಸ್ತರಣಾ ಕಾರ್ಯಕರ್ತರನ್ನಾಗಿ ಸಿದ್ದಪಡಿಸಿ ರೈತರಿಗೆ ಉತ್ತಮ ಸೇವೆ ನೀಡವ ಮತ್ತು ಜೊತೆಗೆ ರಾಷ್ಟ್ರೀಯ ಕೃಷಿ ವಿಸ್ತರಣೆಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ಉದ್ದೇಶಗಳು

• ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.
• ಪರಿಕರÀ ಮಾರಾಟಗಾರರ ಕೃಷಿ ಮಾಹಿತಿ ವಿಸ್ತಣೆ ಸಾಮಥ್ರ್ಯವನ್ನು ಮತ್ತು ನಿರ್ವಹಣೆಯನ್ನು ಉನ್ನತೀಕರಿಸುವುದು.
• ಕೃಷಿಗೆ ಸಂಬಂದಿಸಿದಂತೆ ಕಾನೂನುಗಳ ಬಗ್ಗೆ ಜ್ಞಾನವನ್ನು ಒದಗಿಸುವುದು.
• ಗ್ರಾಮಿಣ ಮಟ್ಟದಲ್ಲಿ ಕೃಷಿಕರಿಗೆ ಒಂದೇ ಸೂರಿನಡಿ ಮಾಹಿತಿ ದೊರೆಯುವಂತೆ ಮಾಡುವುದು.

ಈ ಕಾರ್ಯಕ್ರಮದಡಿ 48 ವಾರಗಳಲ್ಲಿ ಮಾಹಿತಿಯನ್ನು ಪ್ರತಿ ಭಾನುವಾರ ಮತ್ತು ರಜಾದಿನದಂದು ಒದಗಿಸಲಾಗುವುದು. ಒಟ್ಟು 40 ತರಗತಿಗಳು ಮತ್ತು 8 ಕ್ಷೇತ್ರ ಭೇಟಿಗಳು ಈ ಪಠ್ಯಕ್ರಮದಲ್ಲಿ ಒಳಗೊಂಡಿವೆ.

ಕೃಷಿ ಪರಿಕರಗಳ ವಿತರಕರ ತರಬೇತಿ ಕಾರ್ಯಕ್ರಮ (ದೇಸೀ)ದಡಿ ಒಟ್ಟು 11 ಕಾರ್ಯಕ್ರಮಗಳ ಮೂಲಕ 450 ಕೃಷಿ ಪರಿಕರಗಳ ವಿತರಕರಿಗೆÀ ಯಶಸ್ವಿಯಾಗಿ ತರಬೇತಿ ನೀಡಿದ್ದಲ್ಲದೇ ಪ್ರಸಕ್ತ ಸಾಲಿನಲ್ಲಿ 7 ಕೃಷಿ ವಿಜ್ಞಾನ ವಿಸ್ತರಣಾ ಕೇಂದ್ರಗಳ ಮುಖಾಂತರ ಒಟ್ಟು 270 ಕೃಷಿ ಪರಿಕರಗಳ ವಿತರಕರಿಗೆÀ ತರಬೇತಿಯನ್ನು ನೀಡಲಾಗುತ್ತಿದೆ.