Select Page

ಬೀಜ ಘಟಕ

ಬೀಜ ಕೃಷಿಯ ಮೂಲ ಭೂತ ಪರಿಕರ, ಗುಣಮಟ್ಟದ ಬೀಜವು ಉಳಿದ ಹೊಸ ತಂತ್ರಜ್ಞಾನಗಳ ಜೊತೆಗೆ ಉತ್ತಮ ಇಳುವರಿಯನ್ನು ನೀಡಲು ಸಹಾಯ ಮಾಡುತ್ತದೆ. ಆದ್ದರಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಬೀಜ ಗ್ರಾಮ ಮತ್ತು ರೈತರು ಸಹಭಾಗಿತ್ವದಲ್ಲಿ ಬೀಜೋತ್ಪಾದನೆ ಮಾಡುವ ಮುಖಾಂತರ ರೈತರಿಗೆ ಗುಣಮಟ್ಟದ ಬೀಜ ಪೂರೈಕೆ ಮಾಡುತ್ತಿದೆ.

ಪ್ರಾದೇಶಿಕ ಅಗತ್ಯತೆಗೆ ಅನುಗುಣವಾಗಿ ಗುಣಮಟ್ಟದ ಬೀಜವನ್ನು ಒದಗಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಆರು ಜಿಲ್ಲೆಗಳಲ್ಲಿ 10 ಬೀಜ ಸಂಸ್ಕರಣಾ ಘಟಕಗಳು ಮತ್ತು ಬೀಜ ಉಗ್ರಾಣಗಳನ್ನು ವಿವಿಧ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ.

ಹೊಸ ತಳಿಗಳು / ಸಂಕರಣ ತಳಿಗಳ ಗುಣಮಟ್ಟದ ಬೀಜವನ್ನು ರೈತರಿಗೆ ಒದಗಿಸುವ ಜೊತೆಗೆ ಹೊಸ ತಂತ್ರಜ್ಞಾನದ ಮಾಹಿತಿ ನೀಡುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಎಲ್ಲಾ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಪ್ರತಿ ವರ್ಷ ಮೇ 25 ಮತ್ತು ಸೇಪ್ಟೆಂಬರ್ 25 ರಂದು ವಿನೂತನ ಮುಂಗಾರು / ಹಿಂಗಾರು ಬೀಜ ದಿನೋತ್ಸವವನ್ನು ಆಚರಿಸಲಾಗುತ್ತದೆ.

ಬೀಜ ಘಟಕ, ಕೃಷಿ ವಿವಿ., ರಾಯಚೂರು ಕೇಂದ್ರದ ಕೆಲಸವನ್ನು ಪರಿಗಣಿಸಿ ಐಸಿಎಆರ್ – ಭಾರತೀಯ ಬೀಜ ವಿಜ್ಞಾನ ಸಂಸ್ಥೆಯ ಇವರು 2017-18 ನೇ ಸಾಲಿನ ಅತ್ಯುತ್ತಮ ಬೀಜೋತ್ಪಾದನಾ ಕೇಂದ್ರ ಎಂದು ಪುರಸ್ಕರ ನೀಡಿದೆ ಜೊತೆಗೆ ಬೀಜ ಘಟಕದ ವಿಜ್ಞಾನಿಗಳು ಮಾಡಿದ ಕಾರ್ಯಾಗಳಿಗೆ ವಿವಿಧ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಶಾನ್ಯ ಕರ್ನಾಟಕ ರಾಜ್ಯದ ರೈತರನ್ನು ಗುಣಮಟ್ಟದ ಬೀಜೋತ್ಪಾದನೆಯಲ್ಲಿ ಸ್ವಾವಲಂಬಿಗಳಾನ್ನಾಗಿ ಮಾಡುವುದು ಬೀಜ ಘಟಕದ ಮುಖ್ಯ ಉದ್ದೇಶ.

 

ಉಸ್ತುವಾರಿ ಅಧಿಕಾರಿ
ಡಾ.ಬಸವೇಗೌಡ
ವಿಶೇಷಾಧಿಕಾರಿ (ಬೀಜ)
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು – 584 104
ಫೋನ್/ಫ್ಯಾಕ್ಸ್:08532-220344, ಮೋ: 94806 96343
ಮಿಂಚಂಚೆ::so.seeduasr@gmail.com