ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಇವರ ಅನುದಾನದಲ್ಲಿ ಬೀದರ, ರಾಯಚೂರು, ಬಳ್ಳಾರಿ, ಕಲಬುರಗಿ, ಗಂಗಾವತಿ (ಕೊಪ್ಪಳ), ರದ್ದೇವಾಡಗಿ (ಕಲಬುರಗಿ) ಹಾಗೂ ಕವಡಿಮಟ್ಟಿ (ಯಾದಗಿರಿ) ಯಲ್ಲಿ ಒಟ್ಟು 7 ಕೃಷಿ ವಿಜ್ಞಾನ ಕೇಂದ್ರಗಳು ಕೃ.ವಿವಿ, ರಾಯಚೂರು ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳು ತಂತ್ರಜ್ಞಾನ ಪರಿಶೀಲನೆ, ಪರಿಷ್ಕರಣೆ, ಕ್ಷೇತ್ರ ಪರೀಕ್ಷೆ, ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ. ಕೃಷಿ ವಿಜ್ಞಾನ ಕೇಂದ್ರಗಳು ಜಿಲ್ಲೆಯ ಕೃಷಿ ಆರ್ಥಿಕತೆಯನ್ನು ಸುಧಾರಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕೃಷಿ ತಂತ್ರಜ್ಞಾನಗಳ ಜ್ಞಾನ ಕೇಂದ್ರ ಮತ್ತು ಸಂಪನ್ಮೂಲ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿವೆ.
ಕ್ರ.ಸಂ ಕೃಷಿ ವಿಜ್ಞಾನ ಕೇಂದ್ರಗಳು ಜಿಲ್ಲೆ ಸ್ಥಾಪನೆ
1. ಕೃಷಿ ವಿಜ್ಞಾನ ಕೇಂದ್ರ, ಬೀದರ ಬೀದರ 1985
2. ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ರಾಯಚೂರು 1994
3. ಕೃಷಿ ವಿಜ್ಞಾನ ಕೇಂದ್ರ, ಹಗರಿ ಬಳ್ಳಾರಿ 1995
4. ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಕಲಬುರಗಿ 1999
5. ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಕೊಪ್ಪಳ 2004
6. ಕೃಷಿ ವಿಜ್ಞಾನ ಕೇಂದ್ರ, ರದ್ದೆವಾಡಗಿ ಕಲಬುರಗಿ-ಎ 2012
7 ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿ ಯಾದಗಿರ 2017