Select Page

ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿ

ವಲಯ ಕೃಷಿ ಸಂಶೋಧನಾ ಕೇಂದ್ರಕಲಬುರಗಿ

ಈ ಸಂಶೋಧನಾ ಕೇಂದ್ರವು ಕಲಬುರಗಿ ನಗರ ವ್ಯಾಪ್ತಿಯಲ್ಲಿದೆ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇತ್ತಿಚ್ಚಿಗೆ ವಿಮಾನ ಸಂಪರ್ಕವು ಸಹ ಕಲಬುರಗಿಗೆ ದೊರೆತಿದೆ. ಸಂಶೋಧನಾ ಕೇಂದ್ರವು ಒಟ್ಟು 53.94 ಹೆಕ್ಟೇರ್ ಭೂಮಿಯನ್ನು ಹೊಂದಿದೆ ಅದರಲ್ಲಿ 41.15 ಹೆಕ್ಟೇರ್ ಕೃಷಿ ಮಾಡಬಹುದಾಗಿದೆ. ಕಲಬುರಗಿ ಜಿಲ್ಲೆಯು ಕ್ಲಸ್ಟರ್ ಸಿಮೆಂಟ್ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಒಂದು ವಿಶಿಷ್ಟವಾದ ಕಲ್ಲು ಮುಖ್ಯವಾಗಿ “ಶಹಾಬಾದ ಕಲ್ಲು” ಎಂಬ ಹೆಸರಿನ ಕಲ್ಲು ದೊರೆಯುತ್ತದೆ. ಈ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳು. ಮುಖ್ಯವಾಗಿ ತೊಗರಿ ಮತ್ತು ಕಡಲೆ ಹೆಚ್ಚಾಗಿ ಬೆಳೆಯಲಾಗುತ್ತದೆ, ಆದ್ದರಿಂದ ಈ ಜಿಲ್ಲೆಯನ್ನು ಕರ್ನಾಟಕ ತೊಗರಿ ಕಣಜ ಎಂದು ಕರೆಯಲಾಗುತ್ತದೆ. ಇಲ್ಲಿ ಬೆಳೆಯುವ ತೊಗರಿ ಬೆಳೆ ವಿಶಿಷ್ಟ ರುಚಿ ಮತ್ತು ಗುಣಮಟ್ಟವನ್ನು ಹೊಂದಿದೆ, ಗುಲ್ಬರ್ಗಾ ತೊಗರಿ ಬೆಳೆಗೆ ಭೌಗೋಳಿಕ ಸೂಚಕವನ್ನು (ಜಿಐ) ನೀಡಲಾಗಿದೆ. ಈ ಕೇಂದ್ರವು ಎ.ಐ.ಸಿ.ಆರ್.ಪಿ (AICRP) ತೊಗರಿ ಮತ್ತು ಎ.ಐ.ಸಿ.ಆರ್.ಪಿ (AICRP) ಕಡಲೆ ಯೋಜನೆಯನ್ನು ಹೊಂದಿದೆ ಮತ್ತು ಏಳು ವಿಜ್ಞಾನಿಗಳು ಈ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತೊಗರಿಯಲ್ಲಿ ಹತ್ತು ತಳಿಗಳು ಮತ್ತು ಕಡಲೆಯಲ್ಲಿ ಮೂರು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ. ಈ ಸಂಶೋಧನಾ ಕೇಂದ್ರವು ಬೀಜ ಸಂಸ್ಕರಣೆ ಮತ್ತು ಪ್ಯಾಕಿಂಗ ಘಟಕ, ಪಲ್ಸ್ ಮ್ಯಾಜಿಕ್ ಮತ್ತು ಕಡಲೆ ಮ್ಯಾಜಿಕ ಉತ್ಪಾದನಾ ಘಟಕ, ವರ್ಮಿಕಾಂಪೋಸ್ಟ ಘಟಕ, ಜೈವಿಕ ಗೊಬ್ಬರ ಉತ್ಪಾದನಾ ಘಟಕದ, ಟ್ರೈಕೊಡರ್ಮಾ ಉತ್ಪಾದನಾ ಘಟಕ, ಜೀನೋಮಿಕ್ ಲ್ಯಾಬ್, ಗಾಮಾ ವಿಕಿರಣ ಕೊಠಡಿ, ಶೇಖರಣಾ ಗೊದಾಮು ಇತ್ಯಾದಿ ಸೌಲಭ್ಯ ಹೊಂದಿದೆ. ಪ್ರತಿವರ್ಷ ಕನಿಷ್ಟ 500 ಕ್ಟಿಂಟಾಲ್ ಮುಂಗಾರು ದ್ವಿದಳ ಧಾನ್ಯಗಳು (ತೊಗರಿ, ಹೆಸರು, ಉದ್ದು) ಮತ್ತು ಸುಮಾರು 250-300 ಕ್ವಿಂಟಾಲ್ ಕಡಲೆ ಗುಣಮಟ್ಟದ ಬೀಜಗಳನ್ನು ರೈತರಿಗೆ ಮಾರಟ ಮಾಡಲಾಗುತ್ತದೆ. ಸಂಶೋಧನಾ ಕೇಂದ್ರವು 2012ರಲ್ಲಿ ಅತ್ಯತ್ತುಮ ಕೃಷಿ ಸಂಶೋಧನಾ ಕೇಂದ್ರ ಪ್ರಶಸ್ತಿಯನ್ನು ಪಡೆದಿದೆ.

ಡಾ. ರಾಚಪ್ಪ ವಿ. ಹಾವೇರಿ
ಸಹ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರು
ವಲಯ ಕೃಷಿ ಸಂಶೋಧನಾ ಕೇಂದ್ರ,
ಕಲಬುರಗಿ-585102
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು (ಕರ್ನಾಟಕ) ಭಾರತ
ಮೋ.ನಂ: 9480696330
ಪೋ.ನಂ: : 08472 27412
ಇ-ಮೇಲ್: adrzarsk@uasraichur.edu.in