Select Page

ವಿಸ್ತರಣಾ ಪ್ರಾಯೋಜನೆ

ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿ 2018-19ನೇ ಸಾಲಿನಲ್ಲಿ ಸುಮಾರು 16 ವಿಸ್ತರಣಾ ಕಾರ್ಯಕ್ರಮಗಳು/ಯೋಜನೆಗಳು ಜಾರಿಗೊಳಿಸಲಾಗಿದೆ.

ಕೃಷಿಮೇಳ / ರೈತ ಸಮ್ಮೇಳನ

ಬರಗಾಲದಿಂದ ತತ್ತರಿಸಿದ ಪ್ರಸಕ್ತ 2018-2019ರಲ್ಲಿ ಕೃಷಿ ಮೇಳಕ್ಕೆ ಪರ್ಯಾಯವಾಗಿ ಕೃಷಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ಪರಿಣಿತರು, ಪರಿಸರ ತಜ್ಞರು ಹಾಗೂ ಅನುಭವಿಕರೊಂದಿಗೆ ಚರ್ಚೆ ಮತ್ತು ಸಂವಾದ ಕೈಗೊಳ್ಳುವುದು ಸೂಕ್ತವೆನಿಸಿತು. ಕಾರಣ ಈ ಮೇಳವು ಸಮಸ್ತ ರೈತಬಾಂಧವರಿಗೆ ಪರಿಣಾಮಕಾರಿಯಾಗಬಹುದೆಂಬ ಭಾವನೆ ರೈತರ ಯಶಸ್ವಿ ಅನುಭವಗಳ ಅವಲೋಕನ ಹಾಗೂ ಇತರರಿಗೆ ಅಳವಡಿಸಿಕೊಳ್ಳಲು ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಸೂಕ್ತ ವೇದಿಕೆ ಒದಗಿಸಬೇಕೆನ್ನುವುದು ವಿಶ್ವವಿದ್ಯಾಲಯದ ಉದ್ದೇಶ. ಆದಾಯ ಹೆಚ್ಚಿಸಿಕೊಳ್ಳಲು ವಿವಿಧ ಕೃಷಿ ಉಪ ಕಸುಬುಗಳನ್ನು ಅಳವಡಿಸಿಕೊಂಡು ಸಾಧನೆಗೈದ ರೈತರೊಂದಿಗೆ ಅನುಭವ ಹಾಗೂ ವಿಮರ್ಶೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಎರಡು ದಿನದ ಈ ರೈತರ ಸಮ್ಮೇಳನವನ್ನು “ಬದಲಾಗುತ್ತಿರುವ ಹವಾಮಾನದಲ್ಲಿ ಸುಭದ್ರ ಕೃಷಿ” ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿದೆ. ಹೈದ್ರಾಬಾದ್-ಕರ್ನಾಟಕದ ರೈತರ ಹೆಮ್ಮೆಯ ವಿಶ್ವವಿದ್ಯಾಲಯದ ಈ ವಿಶೇಷ ಪರ್ವದಲ್ಲಿ ಸಮಸ್ತ ರೈತಬಾಂಧವರ ಉಪಯೋಗಕ್ಕಾಗಿ ಈ ಸಮ್ಮೇಳನವನ್ನು ದಿನಾಂಕ: 27-28 ಜನವರಿ, 2019, ಪ್ರೇಕ್ಷಾಗೃಹ ಕೃವಿವಿ, ರಾಯಚೂರಿನಲ್ಲಿ ಆಯೋಜಿಸಲಾಯಿತು.
ಈ ಎರಡು ದಿನಗಳ ಕಾರ್ಯಕ್ರಮದ ಅಡಿಯಲ್ಲಿ ಪ್ರಾತ್ಯಕ್ಷಿಕೆಗಳು, ಚರ್ಚಾ ಕೂಟಗಳು, ವಿಜ್ಞಾನಿಗಳ ಜೊತೆ ವಿಚಾರ ವಿನಿಮಯ ಚರ್ಚೆ, ರೈತರಿಂದ ರೈತರಿಗೆ ತರಬೇತಿ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಏರ್ಪಡಿಸಲಾಗಿದೆ. ಸದರಿ ಸಮ್ಮೇಳನದಲ್ಲಿ ಸುಮಾರು 5 ಸಾವಿರ ರೈತ ಬಾಂಧವರು, ರೈತ ಮಹಿಳೆಯರು, ಸ್ವಸಹಾಯ ಗುಂಪುಗಳು ಸರ್ಕಾರದ ವಿವಿಧ ಇಲಾಖೆಯ ಅಧಿಕಾರಗಳು ಹಾಗೂ ವಿಜ್ಞಾನಿಗಳು, ಸರಕಾರೇತರ ಸಂಸ್ಥೆಗಳು, ಸಹಕಾರ ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ರೈತ ಸಮ್ಮೇಳನದ ಲಾಭ ಪಡೆದುಕೊಂಡರು.