Select Page

ಸಂಶೋಧನಾ ನಿರ್ದೇಶನಾಲಯ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಕಲ್ಯಾಣ-ಕರ್ನಾಟಕದ ರೈತ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ಮತ್ತು ಕೃಷಿ ಸಂಬAಧಪಟ್ಟ ಅವಶ್ಯಕತೆಗಳನ್ನು ಪೂರೈಸಲು ೨೦೦೯ ರಲ್ಲಿ ಸ್ಥಾಪನೆಯಾಯಿತು. ವಿಶ್ವವಿದ್ಯಾಲಯವು ೧೬೦೬’ ಉತ್ತರ ಮತ್ತು ೭೭೦೬’ ಪೂರ್ವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದ್ದು ಸಮುದ್ರ ಮಟ್ಟಕ್ಕಿಂತ ೩೯೮.೯ ಮೀ. ಎತ್ತರದಲ್ಲಿದೆ. ಇದರ ವ್ಯಾಪ್ತಿಗೆ ಕರ್ನಾಟಕ ರಾಜ್ಯದ ಶೇ. ೨೨ ರಷ್ಟು (೧೯.೯ ದಶಲಕ್ಷ ಹೇ.), ಭೌಗೋಳಿಕ ಪ್ರದೇಶ ಶೇ. ೩೧ ರಷ್ಟು ಸಾಗುವಳಿ ಪ್ರದೇಶ ಮತ್ತು ಶೇ. ೨೦ ರಷ್ಟು ನೀರಾವರಿ ಪ್ರದೇಶವನ್ನು ಒಳಗೊಂಡಿದ್ದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸೀಮಿತವಾಗಿದೆ. ಈ ಪ್ರಾಂತ್ಯದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ಅನೇಕ ಸಸ್ಯ ಪ್ರಭೇದಗಳಿದ್ದು ವೈವಿಧ್ಯತೆಯಿಂದ ಕೂಡಿದೆ. ತುಂಗಭದ್ರ, ಕೃಷ್ಣ ಮತ್ತು ಕಾರಂಜಗಳAತಹ ಪ್ರಮುಖವಾದ ನೀರಾವರಿ ಯೋಜನೆಗಳಿದ್ದು ಸುಮಾರು ೧೨ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸುತ್ತಿವೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧನಾ ವಿಷಯಗಳೆಂದರೆ, ಮೂಲಭೂತ, ಆದ್ಯತೆಯ ಸಂಶೋಧನೆ ಮತ್ತು ಕೃಷಿ ಕೊರತೆಗಳ ಸುಧಾರಣೆಯ ಕಾರ್ಯಕ್ರಮಗಳಾಗಿವೆ. ಪ್ರಾರಂಭದಿAದ ಪ್ರಸ್ತುತ ವರ್ಷಕ್ಕೆ ೩೫೦ ಕ್ಕೂ ಹೆಚ್ಚಿನ ಸಂಶೋಧನಾ ಕಾರ್ಯಕ್ರಮಗಳನ್ನು ರಾಷ್ಟಿçÃಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ನೀಡಿವೆ. ಇದಲ್ಲದೆ ಕಳೆದ ಹತ್ತು ವರ್ಷದಿಂದ ೫೬ ಯೋಜನೆಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೂ. ೬೫.೮೯೫ ಕೋಟಿ ಮಂಜೂರು ಮಾಡಿದ್ದು ಅನೇಕ ಕಾರ್ಯಗಳು ಸಂಪೂರ್ಣಗೊಂಡಿವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಈಶಾನ್ಯ ಒಣ ವಲಯ, ಈಶಾನ್ಯ ಅರೆ ಮಲೆನಾಡು ವಲಯ ಮತ್ತು ಉತ್ತರ ಒಣ ವಲಯಗಳನ್ನು ಒಳಗೊಂಡಿದೆ. ಸಂಶೋಧನೆಗೆ ೧೩ ಕೃಷಿ ಸಂಶೋಧನಾ ಕೇಂದ್ರಗಳು, ೧೮ ಅಖಿಲ ಭಾರತ ಸುಸಂಘಟಿತ ಪ್ರಾಯೋಜನೆಗಳಿದ್ದು ಈ ಭಾಗದ ರೈತರ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿವೆ. ಸಂಶೋಧನಾ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ಪೀಡೆನಾಶಕಗಳ ಅವಶೇಷ ಮತ್ತು ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯ, ಸಾವಯುವ ಕೃಷಿ ಸಂಶೋಧನಾ ಕೇಂದ್ರ, ಸಮಗ್ರ ಪೀಡೆ ನಿರ್ವಹನೆಯ ಮಾಹಿತ ತಂತ್ರಜ್ಞಾನ ಇ-ಸ್ಯಾಪ್, ನ್ಯಾನೊ ತಂತ್ರಜ್ಞಾನ, ಹವಮಾನ ಬದಲಾವಣೆ ಅಧ್ಯಾಯನ ಕೇಂದ್ರ, ಸಮಗ್ರ ಕೃಷಿ ಪದ್ಧತಿ, ಜೈವಿಕ ನಿಯಂತ್ರಣ ಘಟಕ ಹಾಗೂ ಜೈವಿಕ ಇಂಧನ ಘಟಕ, ತಿಂಥಣಿ ಇವುಗಳು ಕಾರ್ಯನಿರ್ವಹಿಸುತ್ತಿವೆ. ಸಂಶೋಧನಾ ನಿರ್ದೇಶನಾಲಯವು ಅನೇಕ ರಾಷ್ಟಿಯ ಮತ್ತು ಅಂತರರಾಷ್ಟಿಯ ಸಂಘ ಸಂಸ್ಥೆಗಳ ಜೊತೆ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿ, ಮೆಹಿಕೊ ಕಂಪನಿ, ಮಹಾರಾಷ್ಟç, ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಅರೆ-ಶುಷ್ಮ ಉಷ್ಣವಲಯಕ್ಕಾಗಿ ಅಂತರ ರಾಷ್ಟಿçÃಯ ಬೆಳೆ ಸಂಶೋಧನಾ ಸಂಸ್ಥೆ (ICRISAT), ಅಂತರರಾಷ್ಟಿçÃಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣ ಕೇಂದ್ರ (CIMMYT), ಕೇಂದ್ರೀಯಾ ಒಣ ಬೇಸಾಯ ಸಂಶೋಧನಾ ಸಂಸ್ಥೆ (CRIDA), ಅಂತರ ರಾಷ್ಟಿಯ ಭತ್ತ ಸಂಶೋಧನಾ ಸಂಸ್ಥೆ (IRRI), ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR), ಭಾರತೀಯ ಬೆಳೆ ಸಂಸ್ಕರಣಾ ತಂತ್ರಜ್ಞಾನದ ಸಂಸ್ಥೆ (IICPT) ಮುಂತಾದವುಗಳಾಗಿವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಾರಂಭವಾದ ನಂತರ ೩೦ ನೂತನ ತಳಿ/ಹೈಬ್ರಿಡ್‌ಗಳನ್ನು ಬಿಡುಗಡೆಗೊಳಿಸಿದ್ದು ೨೯೩ ಕ್ಕೂ ಹೆಚ್ಚು ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಕೃಷಿ ಯಾಂತ್ರೀಕರಣ, ಹೈನುಗಾರಿಕೆ ಮುಂತಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ತೊಗರಿ ನಾಟಿ ಪದ್ಧತಿ, ಇ-ಸ್ಯಾಪ್ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿ, ಕೂರಿಗೆ ಭತ್ತದ ಬೇಸಾಯ, ಆಹಾರ ಮೌಲ್ಯವರ್ಧನೆ ತಂತ್ರಜ್ಞಾನಗಳು ರಾಷ್ಟಿçÃಯ ಮಟ್ಟದಲ್ಲಿಯೂ ಸಹ ಪ್ರಖ್ಯಾತಿ ಪಡೆದಿವೆ.