ಸಂಸ್ಥೆಯ ಸ್ಥೂಲ ಉದ್ದೇಶಗಳು:
- ರೈತರು ಅನುಸರಿಸುವ ಅಸ್ತಿತ್ವದಲ್ಲಿರುವ ಸಾವಯವ ಕೃಷಿ ಪದ್ಧತಿಗಳ (ಐಟಿಕೆಗಳು) ಸಮೀಕ್ಷೆ, ದಾಖಲಾತಿ ಮತ್ತು ವೈಜ್ಞಾನಿಕ ಮೌಲ್ಯಮಾಪನ.
- ಉತ್ಪಾದಕತೆ, ಲಾಭದಾಯಕತೆ ಮತ್ತು ಮಣ್ಣಿನ ಆರ್ಯೋಗ್ಯವನ್ನು ನಿರ್ವಯಿಸಲು ಒಣ ಬೇಸಾಯ ಮತ್ತು ನೀರಾವರಿ ಪರಿಸರ ವ್ಯವಸ್ಥೆಗಳ ಅಡಿಯಲ್ಲಿ ವಿವಿಧ ಬೆಳೆಗಳ ಸಾವಯವ ಉತ್ಪಾದನೆ ಮತ್ತು ಬೆಳೆ ಪದ್ಧತಿಗಳ ಶಿಷ್ಟಾಚಾರವನ್ನು ಪ್ರಮಾಣೀಕರಿಸಲು ದೀರ್ಘಾವಧಿಯ ನಿರ್ಧಿಷ್ಠ ಸ್ಥ¼,À ಬೇಡಿಕೆ ಚಾಲಿತ ಮತ್ತು ರೈತರು ಆಧಾರಿತ ಸಂಶೋಧನೆಗಳನ್ನು ಕೈಗೊಳ್ಳುವುದು.
- ಬೆಳೆ ಪದ್ಧತಿಗಳನ್ನು ವೈವಿಧ್ಯಗೊಳಿಸುವದು ಮತ್ತು ಈ ಪ್ರದೇಶದಲ್ಲಿನ ವೈವಿಧ್ಯಮಯ ಕೃಷಿ- ಹವಾಮಾನ ವಲಯಗಳಿಗೆ (ವಲಯ-1, 2 ಮತ್ತು 3) ಸೂಕ್ತವಾದ ಸಮಗ್ರ ಸಾವಯವ ಕೃಷಿ ಪದ್ಧತಿಯ ಮಾದರಿಗಳನ್ನು ಅಭಿವೃದ್ಧಿಪಡಿಸುವದು ಮತ್ತು ಉತ್ತೇಜಿಸುವುದು.
- ದಕ್ಷ ಸೂಕ್ಷ್ಮಜೀವಿಯ ತಳಿಗಳನ್ನು ಅಭಿವೃದ್ಧಿಪಡಿಸುವದು, ಜೈವಿಕ ಗೊಬ್ಬರಗಳು, ಜೈವಿಕ-ಕೀಟನಾಶಕಗಳು ಮತ್ತು ಸಾವಯವ ಗೊಬ್ಬರಗಳ ಸಾಮೂಹಿಕ ಉತ್ಪಾದನಾ ಘಟಕಗಳನ್ನು ದೊಡ್ಡ ಪ್ರಮಾಣದ ಉತ್ಪಾದನೆ, ಪ್ರದರ್ಶನ ಮತ್ತು ಪೂರೈಕೆ.
- ಸಂಪನ್ಮೂಲ ಮರುಬಳಕೆಗಾಗಿ ಕೃಷಿ ತ್ಯಾಜ್ಯಗಳನ್ನು ತ್ವರಿತವಾಗಿ ಕಾಂಪೋಸ್ಟ್ ಮಾಡಲು ವೆಚ್ಚದಾಯಕವಲ್ಲದ ಹೊಸ ತಂತ್ರಜ್ಞಾನಗಳನ್ನು ಅಭಿವೃಧ್ಧಿಪಡಿಸುವುದು.
- ಸಾವಯವ ಕೃಷಿಯ ಬಗ್ಗೆ ಕರ್ನಾಟಕ ರಾಜ್ಯ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾಲಕಾಲಕ್ಕೆ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಮಧ್ಯಸ್ಥಿಕೆಗಳು, ಬೆಂಬಲ ಮತ್ತು ಪರಿಹಾರಗಳನ್ನು ಒದಗಿಸುವುದು.
- ಸಾವಯವ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು.
- ಪ್ರಮಾಣೀಕರಣ, ಮಾರುಕಟ್ಟೆ ಸಂಪರ್ಕ ಮತ್ತು ಜಾಗೃತಿಗೆ ಅನುಕೂಲವಾಗುವಂತೆ ರೈತ ಗುಂಪುಗಳನ್ನು ಉತ್ತೇಜಿಸುವುದು.
ಅಭಿವೃದ್ಧಿಪಡಿಸಲಾದ ಮೂಲಸೌಕರ್ಯ ಸೌಲಭ್ಯಗಳು ಮತ್ತು ನೀಡಲಾಗುತ್ತಿರುವ ಸೇವೆಗಳು:
- ಸಂಸ್ಥೆಯ ಕಛೇರಿ ಕಟ್ಟಡದ ಜೊತೆಗೆ ವಿವಿಧ ವಿಷಯಗಳ ಸಂಶೋಧನಾ ಪ್ರಯೋಗಾಲಯ.
- 20 ಎಕರೆ ಪ್ರದೇಶದಲ್ಲಿ ಎನ್ಪಿಒಪಿ ಮಾನದಂಡಗಳ ಪ್ರಕಾರ ಪ್ರದರ್ಶನ ಮತ್ತು ಸಂಶೋಧನಾ ವಿಭಾಗಕ್ಕಾಗಿ ಸಮಗ್ರ ಸಾವಯವ ಕೃಷಿ ಪದ್ಧತಿ ಮಾದರಿಯೊಂದಿಗೆ ಜೈವಿಕ ಕೃಷಿ.
- ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಗಳು ಮತ್ತು ಸಾವಯವ ಗೊಬ್ಬರಗಳ ಸಾಮೂಹಿಕ ಉತ್ಪಾದನೆ ಮತ್ತು ಪೂರೈಕೆ.
- ಸ್ನಾತಕ ಮತ್ತು ಸ್ನಾತಕೋತ್ತರ ಕೃಷಿ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಹೊರತಾಗಿ, ಎಲ್ಲಾ ವಿಸ್ತರಣಾ ಸೇವೆಗಳ ಮೂಲಕ ಎಲ್ಲಾ ಸಾವಯವ ಪಾಲುದಾರರಿಗೆ ಸಾಮಥ್ರ್ಯಭಿವೃದ್ಧಿ ಪಡಿಸುವದು.
- ಮಣ್ಣು, ನೀರು, ಸಸ್ಯ ಮತ್ತು ಸಾವಯವ ಗೊಬ್ಬರಗಳ ಗುಣಮಟ್ಟ ವಿಶ್ಲೇಷಣೆ.
ಸಂಶೋಧನಾ ಸಾಧನೆಗಳು:
- ಹೆಸರು, ಹಿಂಗಾರಿ ಜೋಳ, ತೊಗರಿ, ಸೂರ್ಯಕಾಂತಿ, ಕಡಲೆ ಮತ್ತು ಭತ್ತದ ಸಾವಯವ ಉತ್ಪಾದನಾ ತಂತ್ರಜ್ಞಾನಗಳು.
- ತೊಗರಿ ಮತ್ತು ಹತ್ತಿಯ ಬೆಳೆ ಉಳಿಕೆಗಳ ಶೀಘ್ರ ಕಾಂಪೋಸ್ಟ್ ತಯಾರಿಕಾ ತಾಂತ್ರಿಕತೆ.
![]() |
ಡಾ|| ಎಮ್. ಭೀಮಣ್ಣ ಪ್ರಾಧ್ಯಾಪಕರು ಕೃಷಿ ಕೀಟಶಾಸ್ತ್ರ ಮತ್ತು ಮುಖ್ಯಸ್ಥರು ಸಾವಯವ ಕೃಷಿ ಸಂಶೋಧನಾ ಸಂಸ್ಥೆ |