ಸಂಶೋಧನ ಫಲಿತಾಂಶಗಳು
ಕೃಷಿ ಹವಾಮಾನ ಅಧ್ಯಯನ ಕೇಂದ್ರವು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ಕೇಂದ್ರ ಸ್ಥಾನದಲ್ಲಿ 2012-13 ನೇ ಡಿಸೆಂಬರ್ ತಿಂಗಳಿನಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜನೆ ಬೆಂಗಳೂರು ಅಡಿಯಲ್ಲಿ 50 ಲಕ್ಷ ಅನುದಾನದಲ್ಲಿ ಪ್ರಾರಂಭಗೊಂಡಿತು. ತದನಂತರದಲ್ಲಿ (2014-15) ಮತ್ತು (2015-16) ರಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜ£ಯ 125 ಮತ್ತು 80 ಲಕ್ಷಗಳನ್ನು ಅನುಕ್ರಮವಾಗಿ ಬಿಡುಗಡೆಗೊಳಿಸಿತು.
ಸಂಶೋಧನ ಗುರಿಗಳು
- ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆಗಳಾದ ಹತ್ತಿ, ತೊಗರಿ, ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಮೆಣಸಿನಕಾಯಿ ಇತ್ಯಾದಿ ಬೆಳೆಗಳ ಮೇಲೆ ವಾತಾವರಣ ವೈಪರೀತ್ಯದ ಪ್ರಭಾವ ಬೀರುತ್ತಾ ಹಾಗು ಬೆಳೆಯಾಶ್ರೀತ ಕೀಟ ಮತ್ತು ರೋಗಗಳು ಯಾವ ರೀತಿಯಾಗಿ ವೃದ್ಧಿಗೊಳ್ಳುತ್ತವೆ ಎಂಬುದು ತಿಳಿದುಕೊಳ್ಳುವುದು.
- ವಾತಾವರಣ ವೈಪರೀತ್ಯದ ಪೂರಕವಾದ ಕಾರಣಗಳನ್ನು ತಿಳಿದು ನಿರ್ವಹಣಾ ಕ್ರಮಗಳನ್ನು ರೈತರಿಗೆ ನೀಡುವುದು.
- ರೈತರಿಗೆ ವಾತಾವರಣ ವೈಪರೀತ್ಯದ ಮೂನ್ಸೂಚನೆಗಳನ್ನು ನೀಡುವುದು.
- ರೈತರಿಗೆ, ವಿಸ್ತರಣಾ ಅಧಿಕಾರಿಗಳಿಗೆ ಹಾಗು ವಿದ್ಯಾರ್ಥಿಗಳಿಗೆ ವಾತಾವರಣ ವೈಪರೀತ್ಯದ ಪ್ರತಿಕೂಲ ಮತ್ತು ಅನಾನುಕೂಲದ ಬಗ್ಗೆ ಅರಿವು ಮೂಡಿಸಿವುದು
- ವಾತಾವರಣ ವೈಪರೀತ್ಯವನ್ನು ತಡೆಗಟ್ಟಲು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲು ದೇಶದ ಹಾಗು ವಿದೇಶಗಳ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು.
ಕಳೆದ ನಾಲ್ಕು, ಐದು ವರ್ಷಗಳ ಸಂಶೋಧನಾ ಫಲಿತವಾಗಿ ಹೆಚ್ಚಿನ ಇಂಗಾಲದ ಡೈ ಆಕ್ಷ್ಸೇಡ (550 ಪಿಪಿಎಮ್) ಹಾಗು ಇದರ ಜೊತೆಗೆ ಹೆಚ್ಚಿನ ತಾಪಮಾನ (2ᵒಸೆ ಅಧಿಕ) ಬೆಳೆಗಳ ಮೇಲೆ ಪ್ರಭಾವವನ್ನು ನೋಡಿದಾಗ ಮೇಲೆ ತಿಳಿಸಿದ ಎಲ್ಲಾ ಬೆಳೆಗಳಲ್ಲಿ ಶೇ. 10-15 ರಷ್ಟು ಇಳುವರಿ ಹೆಚ್ಚಿಗೆ ಪಡೆದದ್ದು ಕಂಡು ಬಂದಿದೆ ಆದರೆ ಕೀಟ ಮತ್ತು ರೋಗಗಳ ಉಲ್ಬಣತೆ ಜಾಸ್ತಿಗೊಂಡು ಭಾದೆಯ ತೀವ್ರತೆ ಹೆಚ್ಚಾಗಿ ಇಳುವರಿ ಕುಂಟಿತಗೊಳ್ಳುತ್ತದೆ. ಮುಂದುವರೆದು ಬಿಟಿ ಹತ್ತಿಯನ್ನು ವಾತವರಣ ವೈಪರೀತ್ಯಕ್ಕೆ ಪರೀಕ್ಷಿಸಲಾಗಿ ಶೇ. 30-35 ರಷ್ಟು ಮತ್ತು 8-15 ರಷ್ಟು ಎಂಡೋಟಾಕ್ಸೀನ್ ಬಿಡುವ ವಂಶವಾಹಿನಿಗಳಾದ ಅಡಿಥಿ 1ಂಛಿ ಮತ್ತು ಅಡಿಥಿ 2ಂb ಕುಂಠಿತಗೊಳ್ಳುತ್ತದೆ. ಈ ಕಾರಣಕ್ಕಾಗಿ ಗುಲಾಬಿಕಾಯಿಕೊರಕ ಬಿಟಿ ಹತ್ತಿ ಮೇಲೆ ಹೆಚ್ಚಿನ ಭಾಧೆಯನ್ನು ಮಾಡಲಿಕ್ಕೆ ಅನುಕೂಲವಾಗಿರಬಹುದೆಂದು ತಿಳಿದು ಬಂದಿದೆ. ಇದೇ ರೀತಿಯಾಗಿ ಹಿಪ್ಪುನೇರಳೆಯನ್ನು ವಾತಾವರಣ ವೈಪರೀತ್ಯ ಸಂಶೋಧನೆ ಮಾಡಿದಾಗ ಇದರಲ್ಲಿರುವ ಮೋರಿನ್ ಎಂಬ ಪ್ರೋಟಿನ್ ಅಂಶ ಕಡಿಮೆಯಾಗಿದ್ದು (ಶೇ. 20-25 ರಷ್ಟು) ಅಂತಹ ಎಲೆಗಳನ್ನು ರೇಷ್ಮೇ ಹುಳುಗಳಿಗೆ ತಿನ್ನಿಸುವುದರಿಂದ ಅವುಗಳ ಬೆಳವಣಿಗೆ ಕುಂಠಿತಗೊಂಡು ರೇಷ್ಮೇ ಗೂಡಿನ ಗಾತ್ರ ಹಾಗು ತೂಕ (ಶೇ. 10-15 ರಷ್ಟು) ಕಡಿಮೆಯಾಗುತ್ತದೆ.
ಡಾ. ಎ. ಜಿ. ಶ್ರೀನಿವಾಸ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಕೃಷಿ ಹವಾಮಾನ ಅಧ್ಯಯನ ಕೇಂದ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಮೋ. ಸಂಖ್ಯೆ: 7892693746 ಮಿಂಚಂಚೆ: agsreenivas@gmail.com